ADVERTISEMENT

ವಲಸೆ ಕಾರ್ಮಿಕರು ಅಲೆದಾಡುವಂತಿಲ್ಲ

ಮುಖ್ಯ ಕಾರ್ಯದರ್ಶಿಯಿಂದ ಜಿಲ್ಲಾಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 10:49 IST
Last Updated 28 ಮಾರ್ಚ್ 2020, 10:49 IST

ಬೆಂಗಳೂರು: ರಾಜ್ಯಕ್ಕೆ ವಲಸೆ ಬಂದಿರುವ ಇತರ ರಾಜ್ಯಗಳ ಕಾರ್ಮಿಕರನ್ನು ಕೊರೊನಾ ಭೀತಿಯ ಈ ಸಂದರ್ಭದಲ್ಲಿ ಎಲ್ಲಿಗೂ ಹೋಗಲು ಬಿಡಬಾರದು, ಅವರು ಇದ್ದಂತಹ ಸ್ಥಳದಲ್ಲೇ ವ್ಯವಸ್ಥೆಗಳನ್ನು ಕಲ್ಪಿಸಿಕೊಡಬೇಕು ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

‘ಇದು ಕೇಂದ್ರದ ಸಂಪುಟ ಕಾರ್ಯದರ್ಶಿಯವರಿಂದ ಬಂದಿರುವ ಸೂಚನೆ, ಇತರ ರಾಜ್ಯಗಳಲ್ಲಿರುವ ರಾಜ್ಯದ ಕಾರ್ಮಿಕರನ್ನು ಆ ರಾಜ್ಯದವರು ಅಗತ್ಯದ ಸೌಲಭ್ಯ ನೀಡಿ ಇಟ್ಟುಕೊಳ್ಳುತ್ತಾರೆ, ಅದರಂತೆ ರಾಜ್ಯದಲ್ಲಿರುವ ಇತರ ರಾಜ್ಯಗಳ ವಲಸೆ ಕಾರ್ಮಿಕರನ್ನು ಸಹ ಎಲ್ಲಿಗೂ ಹೋಗದಂತೆ ಅವರು ಈಗ ಇರುವ ಸ್ಥಳದಲ್ಲೇ ಇರುವಂತೆ ನೋಡಿಕೊಳ್ಳಬೇಕು, ಇದು ಆಯಾ ಜಿಲ್ಲಾಧಿಕಾರಿಗಳ ಹೊಣೆಗಾರಿಕೆಯಾಗಿರುತ್ತದೆ’ ಎಂದು ತಿಳಿಸಿದ್ದಾರೆ.

‘ವಸತಿ ಶಾಲೆಗಳು, ಹಾಸ್ಟೆಲ್‌ಗಳು, ಸಮುದಾಯ ಭವನಗಳು, ಶಾಲಾ ಕಟ್ಟಡಗಳಂತಹ ಸೂಕ್ತ ಸ್ಥಳಗಳನ್ನು ಗುರುತಿಸಿ ವಲಸೆ ಕಾರ್ಮಿಕರಿಗೆ ವಸತಿಗೆ ವ್ಯವಸ್ಥೆ ಕಲ್ಪಿಸಬೇಕು, ಒಂದೇ ಸ್ಥಳದಲ್ಲಿ ಗುಂಪುಗಳಲ್ಲಿ ಅವರು ಇರದಂತೆ ನೋಡಿಕೊಳ್ಳಬೇಕು, ಅವರಿಗೆ ಉಚಿತ ಆಹಾರ, ನೀರು ಒದಗಿಸಬೇಕು, ಸಾಕಷ್ಟು ಶೌಚಾಲುಯದ ವ್ಯವಸ್ಥೆ ಕಲ್ಪಿಸಬೇಕು, ಅಗತ್ಯ ಇದ್ದರೆ ತಾತ್ಕಾಲಿಕ ಶೌಚಾಲಯ ಒದಗಿಸಬೇಕು, ನಿರಂತರ ವೈದ್ಯಕೀಯ ತಪಾಸಣೆ ಮಾಡಿಸಬೇಕು, ಪ್ರತಿಯೊಬ್ಬ ಕಾರ್ಮಿಕನ ಮಾಹಿತಿಯನ್ನೂ ಇಟ್ಟುಕೊಂಡಿರಬೇಕು’ ಎಂದು ನಿರ್ದೇಶಕನ ನೀಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.