ADVERTISEMENT

ದೇವದಾರಿನಲ್ಲಿ ಈ ವರ್ಷ ಗಣಿಗಾರಿಕೆ ಆರಂಭ

ಕೆಐಒಸಿಎಲ್‌ ಸಿಎಂಡಿ ಎಂ.ವಿ. ಸುಬ್ಬರಾವ್‌

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 18:56 IST
Last Updated 28 ಜೂನ್ 2021, 18:56 IST
ಎಂ.ವಿ. ಸುಬ್ಬರಾವ್‌
ಎಂ.ವಿ. ಸುಬ್ಬರಾವ್‌   

ಮಂಗಳೂರು: ಬಳ್ಳಾರಿ ಜಿಲ್ಲೆಯ ದೇವದಾರಿನಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಲು ಕೆಐಒಸಿಎಲ್‌ಗೆ ಅನುಮತಿ ದೊರಕಿದೆ. ಈ ಆರ್ಥಿಕ ವರ್ಷದಲ್ಲಿ ಗಣಿಗಾರಿಕೆ ಆರಂಭವಾಗಲಿದೆ ಎಂದು ಕೆಐಒಸಿಎಲ್ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ಸುಬ್ಬರಾವ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ‘₹ 1,500 ಕೋಟಿಗಳ ಐದು ವರ್ಷಗಳ ಯೋಜನೆ ಇದಾಗಿದ್ದು, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು 401 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಪ್ರಥಮ ಹಂತದ ಅನುಮತಿ ನೀಡಿದೆ’ ಎಂದರು.

ಐದು ವರ್ಷಗಳ ಯೋಜನೆಯಡಿ ಸುಮಾರು ಒಂದು ಸಾವಿರ ಮಂದಿಗೆ ಉದ್ಯೋಗ ದೊರಕಲಿದೆ. ಕೆಐಒಸಿಎಲ್‌ನಿಂದ 15 ವರ್ಷಗಳ ಬಳಿಕ ರಾಜ್ಯದಲ್ಲಿ ಮತ್ತೆ ಗಣಿಗಾರಿಕೆ ಆರಂಭ ಆಗಲಿದೆ ಎಂದು ಹೇಳಿದರು.

ADVERTISEMENT

ಕೆಐಒಸಿಎಲ್ ನಾಲ್ಕು ವರ್ಷಗಳಲ್ಲಿ ಉತ್ತಮ ಸಾಧನೆ ತೋರಿದ್ದು, ಕೋವಿಡ್‌ ಸಂಕಷ್ಟದ ನಡುವೆಯೂ ಕಂಪನಿಯು ಈ ಬಾರಿ ₹ 2,477.83 ಕೋಟಿ ಆದಾಯ ಗಳಿಸಿದೆ. ತೆರಿಗೆ ಬಳಿಕ ₹ 301.17 ಕೋಟಿ ಲಾಭ ಗಳಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.