ADVERTISEMENT

ಆಸ್ತಿ ರಿಜಿಸ್ಟರ್ ಮಾಡೋಕೆ ₹50 ಸಾವಿರ ಲಂಚ ಕೇಳಿದ ಬೀದರ್‌ ಉಪನೋಂದಣಾಧಿಕಾರಿ; ಆರೋಪ

ಪ್ರಜಾವಾಣಿ ವಿಶೇಷ
Published 28 ಸೆಪ್ಟೆಂಬರ್ 2023, 12:25 IST
Last Updated 28 ಸೆಪ್ಟೆಂಬರ್ 2023, 12:25 IST

ಆಸ್ತಿ ನೋಂದಣಿಗೆ ಲಂಚ ಕೇಳಿದ ಅಧಿಕಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ತರಾಟೆಗೆ ತೆಗೆದುಕೊಂಡ ಪ್ರಸಂಗ ಬೀದರ್‌ನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆಯಿತು.

ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಕಚೇರಿಗೆ ದಿಢೀರ್ ಭೇಟಿ ನೀಡಿದ ಸಚಿವರು, ಕಚೇರಿಯಲ್ಲಿ ಲಂಚವೇನಾದರೂ ಪಡೆಯಲಾಗುತ್ತಿದೆಯಾ? ಎಂದು ಆಸ್ತಿ ನೋಂದಣಿಗೆ ಬಂದವರನ್ನು ವಿಚಾರಿಸಿದರು. ಆಸ್ತಿ ನೋಂದಣಿಗೆ ರೂ. 35.04 ಲಕ್ಷ ಸ್ಟ್ಯಾಂಪ್ ಡ್ಯೂಟಿ ಇದೆ. ಅಷ್ಟನ್ನು ಮಾತ್ರ ನಾವು ಕಟ್ಟಬೇಕು. ಆದರೆ, ಇವರು ರೂ. 48 ಲಕ್ಷ ಕಟ್ಟುವಂತೆ ಹೇಳುತ್ತಿದ್ದಾರೆ. ₹50 ಸಾವಿರ ಲಂಚ ಕೇಳಿದ್ದಾರೆ ಎಂದು ವ್ಯಕ್ತಿಯೊಬ್ಬರು ಉಪ ನೋಂದಣಾಧಿಕಾರಿ ಸುಭಾಷ್ ಹೊಸಳ್ಳಿ ಎದುರೇ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT