ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಸೋಮವಾರ ನಡೆಸುತ್ತಿದ್ದ ಶಾಲಾಭಿವೃದ್ಧಿ ಸಮಿತಿ ಸಭೆಯ ನಡುವೆ ಬೆಂಗಳೂರಿನಿಂದ ಕರೆ ಬಂದಿದೆ. ಕರೆ ಬರುತ್ತಿದ್ದಂತೆ ಸಭೆಯಿಂದ ಹೊರ ಹೋಗಿದ್ದಾರೆ. ನಂತರ ನಡೆಯಬೇಕಿದ್ದ ಪದವಿ ಪೂರ್ವ ಕಾಲೇಜಿನ ಸಭೆಯನ್ನು ಮೊಟಕುಗೊಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಖಾತೆಯನ್ನು ಅವರಿಂದ ವಾಪಸ್ ಪಡೆದು ಪ್ರವಾಸೋದ್ಯಮ ಇಲಾಖೆ ನೀಡಲು ಯಡಿಯೂರಪ್ಪ ಮುಂದಾಗಿದ್ದಾರೆ.
ಫುಟ್ಬಾಲ್ ಚೆಂಡಿದಂತೆ ಖಾತೆಗಳು ಬದಲಾವಣೆಗಳು ಆಗುತ್ತಿರುವುದಕ್ಕೆ ಸಚಿವ ಮಾಧುಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.