ADVERTISEMENT

ಸಚಿವೆ ವಿರುದ್ಧ ಸಿ.ಟಿ. ರವಿ ಹೇಳಿಕೆ: ವೀರಶೈವ ಮಹಾಸಭಾ ಖಂಡನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2024, 14:33 IST
Last Updated 20 ಡಿಸೆಂಬರ್ 2024, 14:33 IST
<div class="paragraphs"><p>ಸಚಿವೆ ಲಕ್ಷ್ಮಿ  ಹೆಬ್ಬಾಳಕರ ಅವರಿಗೆ  ಮಾನಹಾನಿ ಪದ ಬಳಕೆದ ಬಳಕೆ ಮಾಡಿ ನಿಂದಿಸಿದ ಆರೋಪದಡಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ ಅವರನ್ನು ಪೊಲೀಸರು ಗುರುವಾರ&nbsp;ಬಂಧಿಸಿದರು</p><p></p></div>

ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಮಾನಹಾನಿ ಪದ ಬಳಕೆದ ಬಳಕೆ ಮಾಡಿ ನಿಂದಿಸಿದ ಆರೋಪದಡಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ ಅವರನ್ನು ಪೊಲೀಸರು ಗುರುವಾರ ಬಂಧಿಸಿದರು

   

– ಪ್ರಜಾವಾಣಿ ಚಿತ್ರ

ADVERTISEMENT

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಕೀಳು ಪದಗಳಿಂದ ನಿಂದಿಸಿದ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಅವರ ಹೇಳಿಕೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾ ಖಂಡಿಸಿದೆ.

‘ಬೆಳಗಾವಿಯ ಸುರ್ವಣ ವಿಧಾನಸೌಧದಲ್ಲಿ ನಡೆದ ಪರಿಷತ್ ಕಲಾಪದಲ್ಲಿ ಸಿ.ಟಿ. ರವಿ ಅವರು ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ವರದಿ ನೋಡಿ  ಬೇಸರವಾಯಿತು. ದೇಶದಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಸ್ಥಾನಮಾನ ಮತ್ತು ಗೌರವ ನೀಡಲಾಗಿದೆ. ನಾಲಿಗೆ ನಾಗರಿಕತೆ ಹೇಳುತ್ತದೆ. ಜನಪ್ರತಿನಿಧಿಗಳು ಸದನದ ಗೌರವ, ಘನತೆ ಕಾಪಾಡಬೇಕು. ಸದನದ ಒಳಗೆ ಹಾಗೂ ಹೊರಗೆ ಜನಪ್ರತಿನಿಧಿಗಳ ನಡವಳಿಕೆಗಳು ಇತರರಿಗೆ ಮಾದರಿಯಾಗಿರಬೇಕು. ಅಸಾಂವಿಧಾನಿಕ ಪದ ಬಳಕೆ ಸದನದ ಇತಿಹಾಸಕ್ಕೆ ಕಪ್ಪುಚುಕ್ಕೆ’ ಎಂದು ಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಅವಾಚ್ಯ ಪದ ಬಳಕೆ ಮಾಡಿರುವುದನ್ನು ಅಖಿಲ ಭಾರತ ವೀರಶೈವ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ. ಸಿ.ಟಿ. ರವಿ ವಿರುದ್ಧ ಅಗತ್ಯ ಕಾನೂನು ಕ್ರಮಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.