ADVERTISEMENT

ಬಿಜೆಪಿ ಸರ್ಕಾರದಲ್ಲಿ ಸಚಿವರ ಗುದ್ದಾಟ: ಸಂಸದ ಡಿ.ಕೆ.ಸುರೇಶ್

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 20:52 IST
Last Updated 26 ಆಗಸ್ಟ್ 2020, 20:52 IST
ಕೆಪಿಸಿಸಿ ವತಿಯಿಂದ 100 ಕೊರೊನಾ ಸೇನಾನಿಗಳಿಗೆ ಆರೋಗ್ಯ ಕಿಟ್‍ಗಳನ್ನು ಸಂಸದ ಡಿ.ಕೆ.ಸುರೇಶ್ ವಿತರಿಸಿದರು. ಎಂ.ರಾಜ್‍ಕುಮಾರ್, ಮುಖಂಡರಾದ ರಾಂಪುರ ನಾಗೇಶ್, ಡಾ.ರಾಘವೇಂದ್ರ, ಎ.ಅಮರನಾಥ್, ಎಂ.ತಿಬ್ಬೇಗೌಡ ಇದ್ದಾರೆ
ಕೆಪಿಸಿಸಿ ವತಿಯಿಂದ 100 ಕೊರೊನಾ ಸೇನಾನಿಗಳಿಗೆ ಆರೋಗ್ಯ ಕಿಟ್‍ಗಳನ್ನು ಸಂಸದ ಡಿ.ಕೆ.ಸುರೇಶ್ ವಿತರಿಸಿದರು. ಎಂ.ರಾಜ್‍ಕುಮಾರ್, ಮುಖಂಡರಾದ ರಾಂಪುರ ನಾಗೇಶ್, ಡಾ.ರಾಘವೇಂದ್ರ, ಎ.ಅಮರನಾಥ್, ಎಂ.ತಿಬ್ಬೇಗೌಡ ಇದ್ದಾರೆ   

ರಾಜರಾಜೇಶ್ವರಿನಗರ: ‘ಮಂತ್ರಿಗಳ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟದಿಂದಾಗಿ ರಾಜ್ಯ ಬಿಜೆಪಿ ಸರ್ಕಾರ ಯಾವ ಸಂದರ್ಭದಲ್ಲಾದರೂ ಪತನಗೊಳ್ಳಬಹುದು‘ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.

ರಾಜರಾಜೇಶ್ವರಿನಗರ ಐಡಿಯಲ್ ಹೋಮ್ಸ್‌ನಲ್ಲಿ ಹಮ್ಮಿಕೊಂಡಿದ್ದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ಶಾಸಕರ ಮಾತಿಗೆ ಸಚಿವರು ಕವಡೆ ಕಾಸಿನ ಮರ್ಯಾದೆಯನ್ನೂ ನೀಡುತ್ತಿಲ್ಲ. ಇದರಿಂದ ಬೇಸತ್ತಿರುವ ಅನೇಕ ಬಿಜೆಪಿ ಶಾಸಕರು ಪಕ್ಷ ತ್ಯಜಿಸುವ ಮನಸ್ಸು ಮಾಡಿದ್ದಾರೆ‘ ಎಂದು ತಿಳಿಸಿದರು.

‘ಬಿಜೆಪಿ ಸರ್ಕಾರ ಕೊರೊನಾ ಹೆಸರಿನಲ್ಲಿ ಸಾವಿರಾರು ಕೋಟಿ ಹಣವನ್ನು ಲೂಟಿ ಮಾಡಿದೆ. ಕೊರೊನಾದಿಂದ ಜನಸಾಮಾನ್ಯರು ಕಷ್ಟ ಅನುಭವಿಸುತ್ತಿದ್ದು, ಹಲವಾರು ಕೈಗಾರಿಕೆಗಳು ಮುಚ್ಚಿ ಹೋಗಿವೆ. ಕಾರ್ಮಿಕರು ಬೀದಿ ಪಾಲಾಗುತ್ತಿದ್ದರೂ ಅವರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂದಿಲ್ಲ’ ಎಂದರು. ಕಾಂಗ್ರೆಸ್ ಬೆಂಗಳೂರು ಉತ್ತರ ಜಿಲ್ಲಾ ಘಟಕದ ಅಧ್ಯಕ್ಷ ಎಂ.ರಾಜ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.