ADVERTISEMENT

‘ತಾಯಿ ಕೂಡಿಟ್ಟಿದ್ದ ₹7.80 ಲಕ್ಷ ಮಂದಿರ ನಿರ್ಮಾಣಕ್ಕೆ’

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 22:48 IST
Last Updated 2 ಆಗಸ್ಟ್ 2020, 22:48 IST
ಶ್ರೀರಾಮ ಮಂದಿರದ ಮಾದರಿ
ಶ್ರೀರಾಮ ಮಂದಿರದ ಮಾದರಿ   

ಮೈಸೂರು: ‘ನನ್ನ ತಾಯಿ ತಮ್ಮ ಜೀವಿತದ ಅವಧಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿಯೇ ನಿತ್ಯವೂ ಗೋಲಕದಲ್ಲಿ ಹಣ ಹಾಕುತ್ತಿದ್ದರು. ಅದು ₹ 7.80 ಲಕ್ಷ ಆಗಿದೆ’ ಎಂದು ಬಿಜೆಪಿ ಶಾಸಕ ಎಸ್‌.ಎ.ರಾಮದಾಸ್‌ ಭಾನುವಾರ ಇಲ್ಲಿ ತಿಳಿಸಿದರು.

‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5ರಂದು ಶಿಲಾನ್ಯಾಸ ನೆರವೇರಲಿದೆ. ದೇಶದಲ್ಲಿ ಕೋವಿಡ್ ಪಿಡುಗಿನ ಹಾವಳಿ ತಗ್ಗಿದ ಬಳಿಕ ರಾಮಭಕ್ತರ ಜೊತೆ ಅಯೋಧ್ಯೆಗೆ ತೆರಳಿ, ಕರಸೇವಕರಾಗಿ ಭಾಗವಹಿಸಿ ತಾಯಿ ಕೂಡಿಟ್ಟಿದ್ದ ಹಣವನ್ನು ಟ್ರಸ್ಟ್‌ಗೆ ಸಮರ್ಪಿಸಲಾಗುವುದು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘84ನೇ ವಯಸ್ಸಿನಲ್ಲಿ ನನ್ನ ತಾಯಿ ನಿಧನರಾಗುವ ತನಕ ನಿತ್ಯ ಗೋಲಕಕ್ಕೆ ಹಣ ಹಾಕಿದ್ದಾರೆ. ತಾಯಿಯ ಮರಣದ ಬಳಿಕ ನಾವು, ನಾಲ್ಕು ವರ್ಷಗಳಿಂದ ಇದೇ ಉದ್ದೇಶಕ್ಕಾಗಿ ಗೋಲಕಕ್ಕೆ ಹಣ ಹಾಕುವುದನ್ನು ಮುಂದುವರಿಸುತ್ತಿದ್ದೇವೆ’ ಎಂದು ಅವರು ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.