ADVERTISEMENT

ನೂಪುರ್ ಶರ್ಮಾ ವಿವಾದ ಮರೆಮಾಚಲು ನ್ಯಾಷನಲ್ ಹೆರಾಲ್ಡ್ ಕೇಸ್ ಮುನ್ನೆಲೆಗೆ: ಬಿಕೆಎಚ್

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 11:00 IST
Last Updated 15 ಜೂನ್ 2022, 11:00 IST
ಬಿ.ಕೆ. ಹರಿಪ್ರಸಾದ್
ಬಿ.ಕೆ. ಹರಿಪ್ರಸಾದ್   

ಶಿವಮೊಗ್ಗ: ಪ್ರವಾದಿ ಮೊಹಮ್ಮದ್ ಬಗ್ಗೆ ನೂಪುರ್‌ ಶರ್ಮಾ ಹಾಗೂ ನವೀನ್‌ ಜಿಂದಾಲ್ ಅವಹೇಳನಕಾರಿಯಾಗಿ ಮಾತನಾಡಿದ್ದ ಪ್ರಕರಣದಿಂದ ದೇಶದ ಜನರ ಗಮನ ಬೇರೆಡೆ ಸೆಳೆಯಲು ಇಡಿ ಮುಂದಿಟ್ಟುಕೊಂಡು ನ್ಯಾಷನಲ್ ಹೆರಾಲ್ಡ್ ವಿಚಾರ ಮುನ್ನೆಲೆಗೆ ತರಲಾಗಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.

ತೀರ್ಥಹಳ್ಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2012ರಲ್ಲಿ ಸುಬ್ರಹ್ಮಣ್ಯಸ್ವಾಮಿ ಖಾಸಗಿ ದೂರು ಕೊಟ್ಟಿದ್ದು. ಅದು 'ಬಿ' ರಿಪೋರ್ಟ್ ಹಾಕುವ ಪ್ರಕರಣವಾದರೂ ಒತ್ತಡದ ಮೇಲೆ ಎಫ್‌ಐಆರ್‌ ದಾಖಲಿಸಲಾಗಿತ್ತು. 2017ರಲ್ಲಿ ಇಡಿ ಆ ಕೇಸ್ ಮುಚ್ಚಿತ್ತು. ಈಗ ರಾಜಕೀಯ ದ್ವೇಷದಿಂದ ಮತ್ತೆ ಅದಕ್ಕೆ ಜೀವ ನೀಡಲಾಗಿದೆ‘ ಎಂದರು.

ಬ್ರಿಟಿಷರಿಗೆ ಗುಲಾಮರಾಗಿ ಇದ್ದವರಲ್ಲ ನಾವು (ಕಾಂಗ್ರೆಸ್). ಕ್ಷಮಾಪಣೆ ಪತ್ರವನ್ನು ಬರೆದುಕೊಟ್ಟವರು ಅಲ್ಲ. ಕಾಂಗ್ರೆಸ್ ಸ್ವಾತಂತ್ರ್ಯಕ್ಕೆ ಹೋರಾಡಿದ ಪಕ್ಷ. ಬ್ರಿಟಿಷರ ಲಾಠಿ–ಬೂಟಿಗೆ ಹೆದರಿಲ್ಲ. ಇನ್ನು ಇಡಿ, ಐಟಿ, ಸಿಬಿಐಗೆ ಹೆದರುತ್ತೇವೆಯೇ? ಎಂದು ಪ್ರಶ್ನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.