ADVERTISEMENT

ವಿಧಾನ ಪರಿಷತ್ ಸದಸ್ಯರಾಗಿ ಲಕ್ಷ್ಮಣ ಸವದಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 20:59 IST
Last Updated 17 ಫೆಬ್ರುವರಿ 2020, 20:59 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   

ಬೆಂಗಳೂರು: ವಿಧಾನ ಪರಿಷತ್ ಸದಸ್ಯರಾಗಿ ಬಿಜೆಪಿ ಅಭ್ಯರ್ಥಿ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ 113 ಮತಗಳನ್ನು ಪಡೆದು ಸೋಮವಾರ ಆಯ್ಕೆಯಾದರು. ವಿಧಾನಸಭೆಯಿಂದ ಪರಿಷತ್‌ನ ಒಂದು ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಸವದಿಅಧಿಕಾರ ಅವಧಿ 2022 ಜೂನ್ 14ರ ವರೆಗೆ ಇರುತ್ತದೆ.

ಒಟ್ಟು 120 ಶಾಸಕರು ತಮ್ಮ ಹಕ್ಕು ಚಲಾಯಿಸಿದ್ದು, ಅದರಲ್ಲಿ 7 ಮತಗಳು ಅಸಿಂಧುಗೊಂಡಿದ್ದವು. ಕಾಂಗ್ರೆಸ್, ಜೆಡಿಎಸ್ ಶಾಸಕರು ಮತದಾನದಿಂದ ದೂರ ಉಳಿದರು. ವರಿಷ್ಠರ ಸೂಚನೆ ಧಿಕ್ಕರಿಸಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡಮತ ಚಲಾಯಿಸಿದರು.

ಬಿಜೆಪಿಯಲ್ಲಿ 117 ಶಾಸಕರು ಇದ್ದು, ಅನಾರೋಗ್ಯದಿಂದಾಗಿ ಎಸ್.ಎ.ರಾಮದಾಸ್ ಬಂದಿರಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.