ADVERTISEMENT

ಹಳೇ ಮೊಬೈಲ್‌ ಫೋನ್‌ನಿಂದ ₹4 ಸಾವಿರ ಗಳಿಕೆ ಸಾಧ್ಯ: ಫೋನ್‌ ಬಿಡಿ ಘಟಕ ಉದ್ಯಮ

ಚಿಕ್ಕಬಳ್ಳಾಪುರದಲ್ಲಿ ಬಿಡಿ ಘಟಕಗಳ ಉದ್ಯಮ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 7:48 IST
Last Updated 5 ಜುಲೈ 2018, 7:48 IST
   

ಬೆಂಗಳೂರು: ಹಳೆಯ ಮೊಬೈಲ್‌ ಫೋನ್‌ಗಳನ್ನು ಹಲವು ಬಿಡಿ ಭಾಗಗಳಾಗಿ ಬೇರ್ಪಡಿಸುವ ಘಟಕಗಳ ಉದ್ಯಮಗಳನ್ನು ಚಿಕ್ಕಬಳ್ಳಾಪುರದಲ್ಲಿ ಸ್ಥಾಪಿಸಲಾಗುತ್ತಿದೆ.

ಎರಡು ವರ್ಷಕ್ಕೊಮ್ಮೆ ಸ್ಮಾರ್ಟ್‌ಫೋನ್‌ಗಳನ್ನು ಬದಲಿಸಲೇಬೇಕಾದ ಅನಿವಾರ್ಯತೆಯಿದೆ. ಇದರಿಂದಾಗಿ ಹಳೆಯ ಫೋನ್‌ಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಅದನ್ನು ಮರುಬಳಕೆ ಮಾಡಬಹುದಾದ ಕ್ರಮಗಳ ಬಗ್ಗೆ ಸರ್ಕಾರ ಕ್ರಮವಹಿಸಿದೆ.

ಪ್ರತಿ ವರ್ಷ ಚೀನಾದಿಂದ ಭಾರತಕ್ಕೆ ₹5 ಲಕ್ಷ ಕೋಟಿಗಿಂತಲೂ ಹೆಚ್ಚು ಮೊತ್ತದ ಮೊಬೈಲ್‌ ಫೋನ್‌ಗಳು ಆಮದಾಗುತ್ತಿವೆ. ಅತ್ಯಾಧುನಿಕ ಹಾಗೂ ಆಕರ್ಷಕ ಆಯ್ಕೆಗಳನ್ನು ಹೊತ್ತು ಹೊಸ ಮಾದರಿ ಫೋನ್‌ ಬಿಡುಗಡೆಯಾಗುತ್ತಿವೆ. ಗ್ರಾಹಕರು ಬಹುಬೇಗ ಹೊಸ ಮೊಬೈಲ್‌ ಫೋನ್‌ಗಳ ಖರೀದಿಗೆ ಮುಂದಾಗುತ್ತಿದ್ದಾರೆ. ಇದರಿಂದ ಹಳೆಯ ಫೋನ್‌ಗಳನ್ನು ಬಿಸಾಡುವ ಅಥವಾ ಮನೆಯಲ್ಲಿ ಬಳಸದೆಯೇ ಉಳಿಸಿಕೊಳ್ಳುವುದು ಹೆಚ್ಚಾಗುತ್ತಿದೆ.

ADVERTISEMENT

ಪ್ರತಿ ಹಳೆಯ ಫೋನ್‌ನ್ನು ಮೂಲ ಬಿಡಿಭಾಗಗಳಾಗಿ ಪ್ರತ್ಯೇಕಿಸುವ ಮೂಲಕ ಪ್ರತಿ ಫೋನ್‌ಗೆ ₹4000 ಪಡೆಯಲು ಸಾಧ್ಯವಿದೆ. ಒಟ್ಟು 3 ಕೋಟಿ ಮೊಬೈಲ್‌ ಫೋನ್‌ಗಳನ್ನು ಬಿಡಿ ಘಟಕಗಳಾಗಿ ಬೇರ್ಪಡಿಸುವ ಅವಕಾಶವಿದ್ದು, ಚಿಕ್ಕಬಳ್ಳಾಪುರದಲ್ಲಿ ಬಿಡಿ ಘಟಕಗಳ ಉದ್ಯಮ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.