ADVERTISEMENT

ಬೆಂಗಳೂರು: 100 ರೋಗಿಗಳಿಗೆ ಅಂಗಾಂಗ ಕಸಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2022, 21:10 IST
Last Updated 16 ಅಕ್ಟೋಬರ್ 2022, 21:10 IST
   

ಬೆಂಗಳೂರು: ರಾಜ್ಯ ಅಂಗಾಂಗ ಕಸಿ ಯೋಜನೆಯಡಿ ಈವರೆಗೆ ಕಸಿ ಮಾಡಿಸಿ ಕೊಂಡವರ ಸಂಖ್ಯೆ ನೂರಕ್ಕೆ ತಲುಪಿದೆ.

ರಾಜ್ಯ ಸರ್ಕಾರವು ಬಿಪಿಎಲ್‌ ಕುಟುಂಬಗಳ ರೋಗಿಗಳಿಗಾಗಿ ಈ ಯೋಜನೆಯನ್ನು 2018ರಲ್ಲಿ ಆರಂಭಿ ಸಿತ್ತು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಈ ಯೋಜನೆಯನ್ನು ನಿರ್ವಹಣೆ ಮಾಡುತ್ತಿದೆ. ಯೋಜನೆಯಡಿ ಯಕೃತ್ತು, ಮೂತ್ರಪಿಂಡ ಹಾಗೂ ಹೃದಯ ಸಮಸ್ಯೆ ಇರುವವರಿಗೆ ಕಸಿ ನಡೆಸಲಾಗುತ್ತದೆ. ಚಿಕಿತ್ಸಾ ವೆಚ್ಚವನ್ನು ಟ್ರಸ್ಟ್ ಭರಿಸುತ್ತಿದೆ.

ಮೂತ್ರಪಿಂಡ ಸಮಸ್ಯೆ ಎದುರಿಸುತ್ತಿದ್ದ 77 ರೋಗಿಗಳು, ಹೃದಯ ಸಮಸ್ಯೆ ಎದುರಿಸುತ್ತಿದ್ದ 15 ರೋಗಿಗಳು ಹಾಗೂ ಯಕೃತ್ತು ಸಮಸ್ಯೆ ಎದುರಿಸುತ್ತಿದ್ದ 8 ರೋಗಿಗಳು ಈ ಯೋಜನೆಯಡಿ ಕಸಿ ಮಾಡಿಸಿಕೊಂಡಿದ್ದಾರೆ. ಕಸಿ ಚಿಕಿತ್ಸೆಗೆ ಒಳಗಾದವರಿಗೆ ಇಮ್ಯುನೊಸಪ್ರೆಶನ್ ಔಷಧಗಳಿಗಾಗಿಪ್ರತಿವರ್ಷ ₹ 1 ಲಕ್ಷ ನೀಡಲಾಗುತ್ತದೆ.

ADVERTISEMENT

‘ಬಡವರಿಗೆ ಗಗನ ಕುಸುಮವಾಗಿದ್ದ ಅಂಗಾಂಗ ಕಸಿ ಚಿಕಿತ್ಸೆ ಈಗ ಸುಲಭ ವಾಗಿ ದೊರೆಯುತ್ತಿದೆ. ಇದಕ್ಕೆ ಕಾರಣೀ ಭೂತರಾದ ಅಂಗಾಂಗ ದಾನಿಗಳು ಹಾಗೂ ‘ಜೀವಸಾರ್ಥಕತೆ’ ತಂಡಕ್ಕೆ ಧನ್ಯವಾದಗಳು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.