ADVERTISEMENT

ಶರತ್ ಪ್ರಚಾರ ಮಾಡಿಕೊಳ್ಳಲಿ ಅದಕ್ಕೂ ನನಗೂ ಸಂಬಂಧ ಇಲ್ಲ, ಬಿಜೆಪಿ ಸೇರೋದು ಖಚಿತ

ಸಿಎಂ ಭೇಟಿ ನಂತರ ಎಂಬಿಟಿ ನಾಗರಾಜ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2019, 14:39 IST
Last Updated 28 ಅಕ್ಟೋಬರ್ 2019, 14:39 IST
   

ಬೆಂಗಳೂರು: ಶರತ್ ಬಚ್ಚೇಗೌಡ ತಾನೇ ಅಭ್ಯರ್ಥಿ ಎಂದು ಮನೆ ಮನೆಗೂ ಹೋಗಿ ಪ್ರಚಾರ ಮಾಡುತ್ತಿದ್ದಾರೆ ಅವರು ಪ್ರಚಾರ ಮಾಡಿದರೆ ಮಾಡಿಕೊಳ್ಳಲಿ ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಸೋಮವಾರ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶರತ್ ಬಚ್ಚೇಗೌಡ ಪಕ್ಷೇತರರಾಗಿ ಸ್ಪರ್ಧಿಸೋದಾಗಿ ಹೇಳ್ಕೊಂಡಿದ್ದಾರೆ, ಅವರು ಈಗಾಗಲೇ ಮನೆಮನೆಗೆ ಹೋಗಿ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರ ಮಾಡಿದರೆ, ಮಾಡಿಕೊಳ್ಳಲಿ ಅದಕ್ಕೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ.

ವಿಶ್ವನಾಥ್ ಹೇಳಿಕೆ ಸಮರ್ಥಿಸಿಕೊಂಡ ಎಂಟಿಬಿ

ADVERTISEMENT

ನಾನು ಸುಪ್ರೀಂಕೋರ್ಟ್ ತೀರ್ಪು ಬಂದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ಬಿಜೆಪಿ ಸೇರುತ್ತೇವೆ ಎಂಬ ಬಗ್ಗೆ ಎಚ್.ವಿಶ್ವನಾಥ್ ನಿಜವನ್ನೇ ಹೇಳಿದ್ದಾರೆ. ನಾವು ಬಿಜೆಪಿ ಸೇರೋದು ಎಲ್ಲರಿಗೂ ಗೊತ್ತಲ್ಲ. ಅದು ಈಗಾಗಲೇ ಲೋಕಾರೂಢಿಯಾಗಿರುವ ಸತ್ಯ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಕಾಂಗ್ರೆಸ್‌‌ನಲ್ಲಿ ಮೂರು ಗುಂಪು

ಕಾಂಗ್ರೆಸ್‌ನಲ್ಲಿ‌ ಈಗ ಮೂರು ಗುಂಪುಗಳಾಗಿವೆ, ಮೂಲಗುಂಪು, ಸಿದ್ದರಾಮಯ್ಯ ಗುಂಪು ಮತ್ತು ಪರಮೇಶ್ವರ್ ಗುಂಪು ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ವ್ಯಂಗ್ಯವಾಡಿದ್ದಾರೆ.ಈ ರೀತಿ ಗುಂಪುಗಳಾಗಿದ್ದರಿಂದಲೇ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದೇ ಒಂದು ಸ್ಥಾನ ಗೆದ್ದಿರುವುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.