ಬೆಂಗಳೂರು: ಕಾರಂಜಿ ಆಂಜನೇಯ ದೇವಸ್ಥಾನಕ್ಕೆ ಸೇರಿದ 35,000 ಚದರ ಅಡಿ ಜಾಗವನ್ನು ತೆರವು ಮಾಡುವಂತೆ ಮುಜರಾಯಿ ಇಲಾಖೆ ಬಿಎಂಎಸ್ ಶಿಕ್ಷಣ ಟ್ರಸ್ಟ್‌ಗೆ ನೋಟಿಸ್ ನೀಡಿದೆ.
ಈ ಭೂಮಿಯನ್ನು ಟ್ರಸ್ಟ್‌ಗೆ 30 ವರ್ಷಗಳ ಗುತ್ತಿಗೆಗೆ ನೀಡಲಾಗಿತ್ತು. ಅವಧಿ ಮುಗಿದಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ. ಟ್ರಸ್ಟ್ ಒಪ್ಪಂದವನ್ನು ನವೀಕರಿಸಲು ಬಯಸಿದರೆ ತಿಂಗಳಿಗೆ ₹67 ಲಕ್ಷ ಬಾಡಿಗೆ ನೀಡಬೇಕಿದೆ. ಹಿಂದಿನ ಒಪ್ಪಂದದ ಪ್ರಕಾರ ಟ್ರಸ್ಟ್ ತಿಂಗಳಿಗೆ ₹1000 ಪಾವತಿಸುತ್ತಿತ್ತು.
ಒಪ್ಪಂದ ಮುಗಿದ ಭೂಮಿಯ ಜತೆಗೆ ದೇವಸ್ಥಾನಕ್ಕೆ ಸೇರಿದ ಹೆಚ್ಚುವರಿ 10 ಸಾವಿರ ಚದರ ಅಡಿ ಭೂಮಿಯನ್ನು ಟ್ರಸ್ಟ್ ಅತಿಕ್ರಮಿಸಿಕೊಂಡಿದೆ ಎಂದು ನೋಟಿಸ್‌ನಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.