ADVERTISEMENT

Prajavani Live: ಪುಷ್ಪ ನಮನ ಸಲ್ಲಿಸಿ ಮೈಸೂರು ದಸರಾಗೆ ಎಸ್.ಎಂ. ಕೃಷ್ಣ ಚಾಲನೆ

ಪ್ರಜಾವಾಣಿ ವಿಶೇಷ
Published 7 ಅಕ್ಟೋಬರ್ 2021, 3:21 IST
Last Updated 7 ಅಕ್ಟೋಬರ್ 2021, 3:21 IST
   

ಮೈಸೂರು: ಮಂಜು ಮುಸುಕಿದ ಚಾಮುಂಡಿಬೆಟ್ಟದಲ್ಲಿ ಗುರುವಾರ ದಸರೆಯ ಬೆಳಗಿನ ಕಿರಣಗಳು ಹೊಳೆದವು.

ಕೋವಿಡ್ ಮೂರನೇ ಅಲೆಯ ಆತಂಕದ ನಡುವೆಯೂ ನವರಾತ್ರಿಯ ಸರಳ, ಸಾಂಪ್ರದಾಯಿಕ ಆಚರಣೆಯ ಆರಂಭದ ಕ್ಷಣಗಳಿಗೆ ಬೆಟ್ಟದಲ್ಲಿ ನೆರೆದಿದ್ದ ನೂರಾರು ಗಣ್ಯರು, ಗ್ರಾಮಸ್ಥರು ಸಾಕ್ಷಿಯಾದರು.

ದೇವಸ್ಥಾನದ ಪ್ರಾಂಗಣದಲ್ಲಿ ಬೃಹತ್ ಪೆಂಡಾಲಿನ ಕೆಳಗೆ ರಚಿಸಿದ್ದ ವೇದಿಕೆಯ ಎಡಭಾಗದ ಮಂಟಪದಲ್ಲಿ ಇರಿಸಲಾಗಿದ್ದ ಬೆಳ್ಳಿ ಮಂಟಪದಲ್ಲಿದ್ದ ಚಾಮುಂಡೇಶ್ವರಿ ಮೂರ್ತಿಗೆ ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಬೆಳಿಗ್ಗೆ 8.25ಕ್ಕೆ ಪುಷ್ಪ ನಮನ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು.

ADVERTISEMENT

ಕಾರ್ಯಕ್ರಮವುಪ್ರಜಾವಾಣಿಯ ಫೇಸ್‌ಬುಕ್‌ ಪುಟದಲ್ಲಿನೇರ ಪ್ರಸಾರವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.