ADVERTISEMENT

ದೆಹಲಿ ಗಲಭೆಗೆ ಕೇಂದ್ರ ಗೃಹಮಂತ್ರಿಯೇ ನೇತೃತ್ವ ವಹಿಸಿದ್ದಾರೆ: ಮೊಯ್ಲಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 10:32 IST
Last Updated 1 ಮಾರ್ಚ್ 2020, 10:32 IST
   

ಮೈಸೂರು:ದೆಹಲಿ ಸೇರಿದಂತೆ ದೇಶದಹಲವು ಭಾಗಗಳಲ್ಲಿ ಕೇಂದ್ರದ ಕುಮ್ಮಕ್ಕಿನಿಂದಲೇ ಗಲಭೆಗಳು ನಡೆಯುತ್ತಿವೆ. ಕೇಂದ್ರ ಗೃಹಸಚಿವರು ಇದರ ನೇತೃತ್ವ ವಹಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯಿಲಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನಲ್ಲಿ ಈ ವಿಷಯ ತಿಳಿಸಿದ ಅವರು, ದೆಹಲಿ ಗಲಭೆ ಕುರಿತು ಅಲ್ಲಿನಮುಖ್ಯಮಂತ್ರಿ ಮೌನ ವಹಿಸಿರುವುದು ವಿಪರ್ಯಾಸ ಎಂದೂಮೊಯಿಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಅಸಹಿಷ್ಟುತೆಯಿಂದಾಗಿ ಆರ್ಥಿಕ ದರ ಕುಂಠಿತ

ADVERTISEMENT

ನಂತರ ಮಾತನಾಡಿದ ಮೊಯಿಲಿ,ಹೆಚ್ಚುತ್ತಿರುವ ಅಸಹಿಷ್ಣುತೆಯಿಂದಾಗಿಯೇ ಆರ್ಥಿಕ ಬೆಳವಣಿಗೆ ದರ ಕಡಿಮೆಯಾಗುತ್ತಿದೆ ಎಂದರು.ಅಸಹಿಷ್ಣುತೆ ಇದ್ದರೆ ಯಾರೂ ಬಂಡವಾಳ ಹೂಡಿಕೆ ಮಾಡುವುದಿಲ್ಲ. ಇದರಿಂದ ಸಹಜವಾಗಿಯೇ ಆರ್ಥಿಕ ಬೆಳವಣಿಗೆ ದರ ಕಡಿಮೆಯಾಗುತ್ತಿದೆ ಎಂದರು.

‘ಹಿಂಸೆ ಎಷ್ಟರಮಟ್ಟಿಗೆ ವಿಜೃಂಭಿಸುತ್ತಿದೆ ಎಂದರೆ ಸಣ್ಣಪುಟ್ಟ ಹಿಂಸೆಗೆ ಪ್ರತಿಕ್ರಿಯಿಸಲಾರದಷ್ಟು ಸಮಾಜ ಸಂವೇದನಾರಹಿತವಾಗಿದೆ. ದೊಡ್ಡ ಹಿಂಸೆಗಷ್ಟೇ ಪ್ರತಿಕ್ರಿಯೆ ಎಂಬಂತಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.