ADVERTISEMENT

ಭಗವಂತನನ್ನು ಕಾಣುವ ಪದ್ಧತಿ ಯೋಗ: ನಳಿನ್ ಕುಮಾರ್ ಕಟೀಲ್

ಮನೆಯಲ್ಲಿಯೇ ಸರಳವಾಗಿ ಯೋಗ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 4:27 IST
Last Updated 21 ಜೂನ್ 2020, 4:27 IST
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಯೋಗ ದಿನ ಆಚರಿಸಿದರು.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಯೋಗ ದಿನ ಆಚರಿಸಿದರು.    
""

ಬೆಂಗಳೂರು: ನಗರದಲ್ಲಿ ಭಾನುವಾರ ಸರಳವಾಗಿ ಯೋಗ ದಿನ ಆಚರಿಸಲಾಯಿತು. ಕೊರೊನಾ‌ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಬಹುತೇಕರು ಮನೆಯಲ್ಲಿಯೇ ಯೋಗ ಮಾಡಿದರು. ಕೆಲವು ಸಂಘ- ಸಂಸ್ಥೆಗಳ ಸದಸ್ಯರು ನಿರ್ದಿಷ್ಟ ಅಂತರ ಕಾಯ್ದುಕೊಂಡು ಉದ್ಯಾನದಲ್ಲಿ ಯೋಗಾಸನ ಮಾಡಿದರು.

ಲಾಲ್‌ಬಾಗ್‌ನಲ್ಲಿಬೆಳಿಗ್ಗೆ 6ರಿಂದಲೇ ಸಾರ್ವಜನಿಕರು ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸುವ ಮೂಲಕ ಯೋಗ ದಿನದ ಆಚರಣೆಗೆ ಚಾಲನೆ ನೀಡಲಾಯಿತು.

ವಿಡಿಯೊದಲ್ಲೇ ಯೋಗ: ವಾಟ್ಸ್‌ಆ್ಯಪ್‌ಗ್ರೂಪ್ ರಚನೆ ಮಾಡಿದ್ದ ಕೆಲವು ಶಾಲೆಗಳು, ಯೋಗಾಸನ ಮಾಡಿ ಅದನ್ನು ಚಿತ್ರೀಕರಿಸಿ ಗ್ರೂಪ್‌ನಲ್ಲಿ ಹಾಕುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದವು. ಅದರಂತೆ, ವಿದ್ಯಾರ್ಥಿಗಳು ಮತ್ತು ಪೋಷಕರು ವಿಡಿಯೊ ಮಾಡಿ ಗ್ರೂಪ್‌ನಲ್ಲಿ ಹಾಕುವುದು ಸಾಮಾನ್ಯವಾಗಿತ್ತು.

ADVERTISEMENT

ಬಿಜೆಪಿ‌ ಕಚೇರಿ: ನಗರದಲ್ಲಿನ ಬಿಜೆಪಿ ಕಚೇರಿಯಲ್ಲಿಯೂ ಸರಳವಾಗಿ ಯೋಗ ದಿನ ಆಚರಿಸಲಾಯಿತು. ಸೂಕ್ತ ಅಂತರ ಕಾಯ್ದುಕೊಂಡು ಯೋಗಾಸನಗಳನ್ನು ಪ್ರದರ್ಶಿಸಲಾಯಿತು.

‘ಯೋಗವು ಭಾರತೀಯ ಸಂಸ್ಕೃತಿಯಲ್ಲಿನ ಮಹತ್ವದ ಪದ್ಧತಿ. ವಿಜ್ಞಾನ, ಗಣಿತದಂತೆಯೇ ಜಗತ್ತಿಗೆ ಭಾರತದ ಪ್ರಮುಖ ಕೊಡುಗೆ ಯೋಗ. ಮನಸ್ಸು ಮತ್ತು ಬುದ್ಧಿಯ ಮೂಲಕ ಭಗವಂತನನ್ನು, ಮೋಕ್ಷವನ್ನು ಕಾಣುವ ಪದ್ಧತಿ ಇದು’ಎಂದು ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

‘ಸಮಾಜದಲ್ಲಿ ಜನರ ಸ್ವಾಸ್ಥ್ಯ ಕಾಪಾಡುವಲ್ಲಿ ಯೋಗದ ಕೊಡುಗೆ ದೊಡ್ಡದು’ಎಂದರು.‌

ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಮತ್ತಿತರರು ಇದ್ದರು.‌

ಯೋಗ ದಿನಕ್ಕೂ ಮುನ್ನ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಲಾಯಿತು.

ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗಪಟುಗಳು ಭಾನುವಾರ ವಿಧಾನಸೌಧದ ಮುಂಭಾಗ ವಿವಿಧ ಆಸನಗಳನ್ನು ಪ್ರದರ್ಶಿಸಿದರು. -ಪ್ರಜಾವಾಣಿ ಚಿತ್ರ/ಎಸ್.ಕೆ. ದಿನೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.