ADVERTISEMENT

ಯಲ್ಲಾಪುರ | ಶಾಂತಾರಾಮ ಸಿದ್ದಿ ಮನೆಗೆ ಭೇಟಿ ನೀಡಿದ ನಳಿನ್ ಕುಮಾರ್ ಕಟೀಲ್

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 7:53 IST
Last Updated 28 ಜುಲೈ 2020, 7:53 IST
​ಶಾಂತಾರಾಮ ಸಿದ್ದಿ ಅವರನ್ನು ನಳಿನ್ ಕುಮಾರ್ ಅವರು ಸನ್ಮಾನಿಸಿದರು.
​ಶಾಂತಾರಾಮ ಸಿದ್ದಿ ಅವರನ್ನು ನಳಿನ್ ಕುಮಾರ್ ಅವರು ಸನ್ಮಾನಿಸಿದರು.   

ಯಲ್ಲಾಪುರ: ವನವಾಸಿ ಜನಾಂಗಗಳ ಉನ್ನತಿಗೆ ಶ್ರಮಿಸಿದ ಶಾಂತಾರಾಮ ಸಿದ್ದಿ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ಲಭಿಸಿರುವುದು ವನವಾಸಿ ಜನಾಂಗದ ಅಭಿವೃದ್ಧಿಗೆ ಕಾರಣವಾಗಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ತಾಲ್ಲೂಕಿನ ಹಿತ್ಲಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪುರ್ಲೇಮನೆಯಲ್ಲಿರುವ ಶಾಂತಾರಾಮ ಸಿದ್ದಿ ಅವರ ಮನೆಗೆ ಭೇಟಿ ನೀಡಿ, ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಬುಡಕಟ್ಟು ಜನಾಂಗದಲ್ಲಿ ಜನಿಸಿದರೂ ಸ್ವತಃ ಅಕ್ಷರ ಕಲಿತು, ಅಕ್ಷರ ಹಂಚುವ ಕಾರ್ಯ ಮಾಡುತ್ತಿರುವ ಇವರನ್ನು ಮೇಲ್ಮನೆಗೆ ಆಯ್ಕೆ ಮಾಡಿದ್ದು ಸಮಂಜಸವಾಗಿದೆ. ವಿಧಾನ ಪರಿಷತ್ತಿನಲ್ಲಿ ವನವಾಸಿ ಜನಾಂಗದ ಅಭಿವೃದ್ಧಿ ಪರವಾದ ಧ್ವನಿ ಕೇಳಲಿ ಎಂದರು.

ಶಾಂತಾರಾಮ ಸಿದ್ದಿ ಅವರು ನಳಿನ್ ಕುಮಾರ್ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಮುಖರಾದ ಅರುಣ ಕುಮಾರ, ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯ್ಕ, ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್, ರಾಜ್ಯ ಘಟಕದ ವಕ್ತಾರ ಪ್ರಮೋದ ಹೆಗಡೆ, ಪ್ರಮುಖರಾದ ಎಂ.ಜಿ.ಭಟ್ಟ ಸಂಕದಗುಂಡಿ, ಗಣಪತಿ ಮಾನಿಗದ್ದೆ, ಪ್ರಸಾದ ಹೆಗಡೆ, ಗಣೇಶ ಹೆಗಡೆ, ರೇಖಾ ಭಟ್ಟ, ರಾಧಾ ಹೆಗಡೆ, ವನವಾಸಿ ಪ್ರಮುಖರಾದ ದೋಂಡು ಪಾಟೀಲ್, ವಿಠ್ಠು ಪಾಂಡ್ರಮೀಸೆ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.