ADVERTISEMENT

ಅಮೆರಿಕೆಯಲ್ಲಿ ಮೃತಪಟ್ಟ ನಂದಿಗಮ್‌ ಶವ ಹುಟ್ಟೂರಿಗೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2019, 19:57 IST
Last Updated 31 ಮಾರ್ಚ್ 2019, 19:57 IST
ನಂದಿಗಮ್‌ ಮಣಿದೀಪ್‌
ನಂದಿಗಮ್‌ ಮಣಿದೀಪ್‌   

ರಾಯಚೂರು: ಅಮೆರಿಕದ ನ್ಯೂ ಜೆರ್ಸಿಯ ಆಸ್ಪತ್ರೆಯಲ್ಲಿ ಸಂಶಯಾಸ್ಪದವಾಗಿ ಮೃತಪಟ್ಟಿರುವ ಸಿಂಧನೂರು ತಾಲ್ಲೂಕು ಗಾಂಧಿನಗರದ ಯುವ ವೈದ್ಯ ಡಾ.ನಂದಿಗಮ್‌ ಮಣಿದೀಪ್‌ (28) ಅವರ ಪಾರ್ಥೀವ ಶರೀರವನ್ನು ಭಾರತಕ್ಕೆ ತರಲಾಗಿದೆ.

‘ಭಾನುವಾರ ರಾತ್ರಿ 8 ಗಂಟೆಗೆ ಶವ ಹೈದರಾಬಾದ್‌ಗೆ ಬಂದಿದ್ದು, ಅಲ್ಲಿಂದ ರಸ್ತೆ ಮೂಲಕ ಹುಟ್ಟೂರಿಗೆ ಕೊಂಡೊಯ್ಯಲಾಯಿತು. ಏಪ್ರಿಲ್‌ 1ರಂದು ಅಂತ್ಯಕ್ರಿಯೆ ನಡೆಯಲಿದೆ’ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಡಾ.ನಂದಿಗಮ್‌ ಅವರು ಮಂಗಳೂರಿನ ಮಣಿಪಾಲ ಕಸ್ತೂರಬಾ ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಮುಗಿಸಿ ಸ್ನಾತಕೋತ್ತರ ಪದವಿಗಾಗಿ ಮೂರು ವರ್ಷಗಳ ಹಿಂದೆ ನ್ಯೂ ಜೆರ್ಸಿಯ ಸೇಂಟ್‌ ಪೀಟರ್ಸ್‌ ಯುನಿವರ್ಸಿಟಿ ಸೇರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.