ADVERTISEMENT

ನಂದಿನಿ ಹಾಲಿನ ದರ ಹೆಚ್ಚಳ ಪ್ರಸ್ತಾಪ: ಜನರ ಮೇಲೆ ಬರೆ ಎಂದ ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜೂನ್ 2023, 6:02 IST
Last Updated 22 ಜೂನ್ 2023, 6:02 IST
ನಂದಿನಿ ಹಾಲು ದರ ಏರಿಕೆಗೆ ಪ್ರಸ್ತಾವ
ನಂದಿನಿ ಹಾಲು ದರ ಏರಿಕೆಗೆ ಪ್ರಸ್ತಾವ   

ಬೆಂಗಳೂರು: ನಂದಿನಿ ಹಾಲಿನ ದರವನ್ನು ಲೀಟರ್‌ಗೆ ₹5 ಹೆಚ್ಚಿಸುವ ಕೆ.ಎಂ.ಎಫ್‌ನ ನೂತನ ಅಧ್ಯಕ್ಷ ಭೀಮಾ ನಾಯ್ಕ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯದ ಪ್ರಜೆಗಳ ಜೇಬಿಗೆ ಸರ್ಕಾರ ಕನ್ನ ಹಾಕಿದೆ ಎಂದು ಕಿಡಿಕಾರಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ, ಕೆಎಂಫ್ ಅಧ್ಯಕ್ಷರು ಹಾಲಿನ ದರವನ್ನು ಲೀಟರಿಗೆ ₹5 ಹೆಚ್ಚಿಸುತ್ತೇವೆ ಎಂದು ಏಕಾಏಕಿ ಹೇಳುವ ಮೂಲಕ ರಾಜ್ಯದ ಪ್ರಜೆಗಳ ಜೇಬಿಗೆ ಕನ್ನ ಹಾಕಿದೆ. ಸಿದ್ದರಾಮಯ್ಯ ಅವರ ಎಟಿಎಂ ಸರ್ಕಾರದಲ್ಲಿ ಈಗಾಗಲೇ ದಿನ ಬಳಕೆ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಇದೀಗ ಹಾಲಿನ ದರವನ್ನೂ ಏರಿಸುವ ಮೂಲಕ ರಾಜ್ಯದ ಬಡ ಜನರ ಮೇಲೆ ಬರೆ ಎಳೆಯುತ್ತಿದೆ‘ ಎಂದು ಹೇಳಿದೆ.

ಅಲ್ಲದೆ, ಈ ಜನದ್ರೋಹಿ ನಿರ್ಧಾರದಿಂದ ಸರ್ಕಾರ ದೂರ ಉಳಿಯಬೇಕೆಂದು ಬಿಜೆಪಿ ಆಗ್ರಹಿಸುತ್ತದೆ ಎಂದು ನುಡಿದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.