ADVERTISEMENT

ಉದ್ಯೋಗ ಆಧಾರಿತ ಶಿಕ್ಷಣ ಅಗತ್ಯ: ಸಚಿವ ಬಿ.ಸಿ. ನಾಗೇಶ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 22:06 IST
Last Updated 22 ಸೆಪ್ಟೆಂಬರ್ 2021, 22:06 IST
ಕಾರ್ಯಾಗಾರವನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಉದ್ಘಾಟಿಸಿದರು. ಟ್ರಸ್ಟಿ ಎ.ಪಿ. ಆಚಾರ್ಯ, ಅಧ್ಯಕ್ಷ ಟಿ.ವಿ. ಮಾರುತಿ, ಉಪಾಧ್ಯಕ್ಷ ಕೆ.ಎನ್. ನರಸಿಂಹಮೂರ್ತಿ, ಟ್ರಸ್ಟಿ ಕೆ.ಮೋಹನ ದೇವ್ ಆಳ್ವ, ಎ.ಆರ್. ಆಚಾರ್ಯ ಇದ್ದರು
ಕಾರ್ಯಾಗಾರವನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಉದ್ಘಾಟಿಸಿದರು. ಟ್ರಸ್ಟಿ ಎ.ಪಿ. ಆಚಾರ್ಯ, ಅಧ್ಯಕ್ಷ ಟಿ.ವಿ. ಮಾರುತಿ, ಉಪಾಧ್ಯಕ್ಷ ಕೆ.ಎನ್. ನರಸಿಂಹಮೂರ್ತಿ, ಟ್ರಸ್ಟಿ ಕೆ.ಮೋಹನ ದೇವ್ ಆಳ್ವ, ಎ.ಆರ್. ಆಚಾರ್ಯ ಇದ್ದರು   

ಬೆಂಗಳೂರು: ‘ವಿದ್ಯಾರ್ಥಿ ಕೇಂದ್ರಿತ ಮತ್ತು ಉದ್ಯೋಗ ಆಧಾರಿತ ಶಿಕ್ಷಣ ನೀಡುವ ಅಗತ್ಯ ಇರುವುದರಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ಎ.ಪಿ.ಎಸ್‌ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ನೀತಿ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ. ವಿದ್ಯಾರ್ಥಿ ಮತ್ತು ಉದ್ಯೋಗ ಕೇಂದ್ರಿತ ಶಿಕ್ಷಣ ನೀಡಲು ಇನ್ನೂ ಆಗಿಲ್ಲ. ಹೀಗಾಗಿ, ಶಿಕ್ಷಣ ವ್ಯವಸ್ಥೆಯ ಬದಲಾವಣೆ ಅಗತ್ಯವಿದೆ. ನಮ್ಮ ದೇಶದ ಸಾಂಪ್ರದಾಯಿಕ ಶಿಕ್ಷಣದಲ್ಲಿ ಇರುವ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಇದಕ್ಕೆ ಅಧ್ಯಾಪಕರ ಸಹಕಾರ ಬೇಕು’ ಎಂದು ಹೇಳಿದರು.

ADVERTISEMENT

ಸಂಸ್ಥೆಯ ಅಧ್ಯಕ್ಷ ಟಿ.ವಿ. ಮಾರುತಿ ಮಾತನಾಡಿ, ‘ಹೊಸ ಶಿಕ್ಷಣ ನೀತಿ ಇಂದು ಅತ್ಯಗತ್ಯವಾಗಿ ಬೇಕಾಗಿದೆ. ಅನೇಕ ವರ್ಷಗಳ ಹಿಂದೆಯೇ ಆಗಬೇಕಿದ್ದ ಕೆಲಸ ಇಂದು ಕಾರ್ಯರೂಪಕ್ಕೆ ಬರುತ್ತಿರುವುದು ಸಂತಸದ ವಿಷಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.