ADVERTISEMENT

ನೀಟ್‌, ಸಿಇಟಿ ಅವ್ಯವಸ್ಥೆ ಅಭ್ಯರ್ಥಿಗಳ ಪರದಾಟ

ದಾಖಲೆಗಳ ಅಪ್‌ಲೋಡ್‌, ನೋಂದಣಿಗೆ ಸರ್ವರ್, ತಾಂತ್ರಿಕ ಸಮಸ್ಯೆ

ಚಂದ್ರಹಾಸ ಹಿರೇಮಳಲಿ
Published 19 ಅಕ್ಟೋಬರ್ 2022, 21:53 IST
Last Updated 19 ಅಕ್ಟೋಬರ್ 2022, 21:53 IST
ಬೆಂಗಳೂರಿನ ಮಲ್ಲೇಶ್ವರದ ಕೆಇಎ ಕಚೇರಿ ಆವರಣದಲ್ಲಿ ಬುಧವಾರ ಕಾಯುತ್ತಿದ್ದ ನೀಟ್‌, ಸಿಇಟಿ ಅಭ್ಯರ್ಥಿಗಳು ಹಾಗೂ ಪೋಷಕರು.
ಬೆಂಗಳೂರಿನ ಮಲ್ಲೇಶ್ವರದ ಕೆಇಎ ಕಚೇರಿ ಆವರಣದಲ್ಲಿ ಬುಧವಾರ ಕಾಯುತ್ತಿದ್ದ ನೀಟ್‌, ಸಿಇಟಿ ಅಭ್ಯರ್ಥಿಗಳು ಹಾಗೂ ಪೋಷಕರು.   

ಬೆಂಗಳೂರು: ವೈದ್ಯಕೀಯ (ನೀಟ್‌), ಎಂಜಿನಿಯರಿಂಗ್ ಹಾಗೂ ಇತರೆ ವೃತ್ತಿಪರ ಕೋರ್ಸ್‌ಗಳ (ಸಿಇಟಿ) ಪ್ರವೇಶ ಪ್ರಕ್ರಿಯೆಯಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ತಾಂತ್ರಿಕ ದೋಷ, ಸರ್ವರ್ ಸಮಸ್ಯೆಗಳಿಂದಾಗಿ ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ಸಾಧ್ಯವಾಗದೆ ಅಭ್ಯರ್ಥಿಗಳು ಹೈರಾಣಾಗಿದ್ದಾರೆ.

ಸಮಸ್ಯೆಗಳಿಂದ ಕಂಗಾಲಾಗಿ ಕರ್ನಾ ಟಕ ಪರೀಕ್ಷಾ ಪ್ರಾಧಿಕಾರದ ಸಹಾಯ ವಾಣಿಗಳಿಗೆ ಕರೆ ಮಾಡಿದರೂ, ಅಲ್ಲಿನ ಸಿಬ್ಬಂದಿ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಇದರಿಂದ ರಾಜ್ಯದ ಮೂಲೆಮೂಲೆಗಳಿಂದ ಅಭ್ಯರ್ಥಿಗಳು ಹಾಗೂ ಪೋಷಕರು ಮಲ್ಲೇಶ್ವರದ ಕೆಇಎ ಕಚೇರಿಗೆ ಎಡತಾಕುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಸರದಿ ಯಲ್ಲಿ ನಿಂತರೂ ಸಮಸ್ಯೆ ಬಗೆಹರಿದಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT