ADVERTISEMENT

ನೀಟ್‌ ಫಲಿತಾಂಶ ಪ್ರಕಟ: 50 ರ‍್ಯಾಂಕ್‌ ವಿಜೇತರಲ್ಲಿ ರಾಜ್ಯದ ಮೂವರು

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 2:27 IST
Last Updated 6 ಜೂನ್ 2019, 2:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:‘ನೀಟ್‌’ ಫಲಿತಾಂಶ ಹೊರಬಿದ್ದಿದ್ದು, ರಾಜ್ಯದ ಮೂವರು 50 ರ‍್ಯಾಂಕ್‌ನೊಳಗಿನ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ರಾಜ್ಯದ 64,982 ಅಭ್ಯರ್ಥಿಗಳು ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್‌ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಮುಂದಿನ ಹಂತದಸೀಟು ಆಯ್ಕೆ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವ ಅರ್ಹತೆ ಗಳಿಸಿಕೊಂಡಿದ್ದಾರೆ.

ರಾಜ್ಯದಡಿ.ಆರ್‌.ಫಣೀಂದ್ರ ಅಖಿಲ ಭಾರತ ಮಟ್ಟದಲ್ಲಿ 36ನೇ ರ‍್ಯಾಂಕ್‌, ಪಿ.ಮಹೇಶ್‌ ಆನಂದ್‌ 43ನೇ ರ‍್ಯಾಂಕ್‌ ಹಾಗೂ ಪ್ರಜ್ಞಾಮಿತ್ರಾ ಮಹಿಳಾ ವಿಭಾಗದಲ್ಲಿ 20ನೇ ರ‍್ಯಾಂಕ್‌ ಗಳಿಸಿದ್ದಾರೆ. ಈ ಬಾರಿ ನ್ಯಾಷನಲ್‌ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಪುರುಷರ ವಿಭಾಗ ಮತ್ತು ಮಹಿಳಾ ವಿಭಾಗ ಎಂದು ಪ್ರತ್ಯೇಕಿಸಿ ಮೊದಲ 20 ರ‍್ಯಾಂಕ್‌ಗಳ ಪಟ್ಟಿ ಪ್ರಕಟಿಸಿದೆ.

ADVERTISEMENT

ಈ ವರ್ಷ ರಾಜ್ಯದಿಂದ 1,15,931 ಮಂದಿ ನೀಟ್‌ಗೆ ಹೆಸರು ನೋಂದಾಯಿಸಿದ್ದರು. ಅದರಲ್ಲಿ 1,02,735 ಮಂದಿ ಪರೀಕ್ಷೆಗೆ ಹಾಜರಾಗಿ
ದ್ದರು. ರಾಜ್ಯದ 1,017 ಮಂದಿ ಕನ್ನಡದಲ್ಲಿ ಪರೀಕ್ಷೆ ಬರೆದಿದ್ದರು. ಅರ್ಹತೆಯಲ್ಲಿ ಕಳೆದ ವರ್ಷಕ್ಕಿಂತ ಕೊಂಚ ಕುಸಿತ ಕಂಡು ಬಂದಿದೆ.

ಈ ವರ್ಷ ರಾಜ್ಯದಿಂದ 1,15,931 ಮಂದಿ ನೀಟ್‌ಗೆ ಹೆಸರು ನೋಂದಾಯಿಸಿದ್ದರು. 1,02,735 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 64,982 ಮಂದಿ ಅರ್ಹತೆ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಶೇ 63.51ರಷ್ಟು ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರೆ, ಈ ಬಾರಿ ಅದು ಶೇ 3.25ಕ್ಕೆ ಕುಸಿದಿದೆ. ರಾಜ್ಯದ 1,017 ಮಂದಿ ಕನ್ನಡದಲ್ಲಿ ಪರೀಕ್ಷೆ ಬರೆದಿದ್ದರು.

ರಾಷ್ಟ್ರಮಟ್ಟದಲ್ಲಿ

ರಾಜಸ್ಥಾನದ ನಳಿನ್‌ ಖಂಡೇವಾಲ್‌ ಪ್ರಥಮ ರ‍್ಯಾಂಕ್‌ ಗಳಿಸಿದ್ದರೆ, ದೆಹಲಿಯ ಭವಿಕ್‌ ಬನ್ಸಾಲ್‌ ದ್ವಿತೀಯ ಹಾಗೂ ಉತ್ತರ ಪ್ರದೇಶ ಅಕ್ಷರ್ ಕೌಶಿಕ್‌ ತೃತೀಯ ರ‍್ಯಾಂಕ್‌ ಗಳಿಸಿದ್ದಾರೆ.

ಈ ಬಾರಿ ಒಟ್ಟು 14,10,755 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 7,97,042 ಮಂದಿ ಅರ್ಹತೆ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.