ADVERTISEMENT

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಚಿವರಿಗೆ ಸೂಚನೆ

ಬಿಎಸ್‌ವೈ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 19:53 IST
Last Updated 20 ಆಗಸ್ಟ್ 2019, 19:53 IST
   

ಬೆಂಗಳೂರು: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎರಡು ದಿನ ಪ್ರವಾಸ ಮಾಡಿ ಜನತೆ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜತೆ ಚರ್ಚೆ ನಡೆಸಿ ವರದಿ ತರಬೇಕೆಂದು ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಂಪುಟ ಸಹೋದ್ಯೋಗಿಗಳಿಗೆ ಸೂಚಿಸಿದರು.

ಸಂಪುಟ ಸಭೆಯ ತೀರ್ಮಾನದ ಬಗ್ಗೆ ಹಿರಿಯ ಸಚಿವರಾದ ಜೆ.ಸಿ.ಮಾಧುಸ್ವಾಮಿ ಮತ್ತು ಎಸ್‌.ಸುರೇಶ್‌ ಕುಮಾರ್‌ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಪ್ರವಾಹ ಪೀಡಿತ ಪ್ರದೇಶದಲ್ಲಿ ತಾಲ್ಲೂಕು ಮಟ್ಟದಲ್ಲಿ ಜನರಿಂದ ಮತ್ತು ಅಧಿಕಾರಿಗಳಿಂದ ಸಲಹೆ ಪಡೆದುಕೊಳ್ಳಬೇಕು. ಬಳಿಕ ಮತ್ತೊಮ್ಮೆ ಸಭೆ ಸೇರಿ, ತ್ವರಿತವಾಗಿ ಕೈಗೊಳ್ಳುವ ಕ್ರಮಗಳು ಮತ್ತು ದೀರ್ಘಕಾಲೀನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಸಚಿವರ ಪ್ರವಾಸ ಎಲ್ಲೆಲ್ಲಿ

ಬೆಳಗಾವಿ– ಲಕ್ಷ್ಮಣ ಸವದಿ, ಚಿಕ್ಕೋಡಿ– ಶಶಿಕಲಾ ಜೊಲ್ಲೆ, ಬಾಗಲಕೋಟೆ– ಈಶ್ವರಪ್ಪ, ಗೋವಿಂದ ಕಾರಜೋಳ, ಹಾವೇರಿ– ಬಸವರಾಜ ಬೊಮ್ಮಾಯಿ, ಉತ್ತರ ಕನ್ನಡ,ಧಾರವಾಡ– ಜಗದೀಶ ಶೆಟ್ಟರ್, ಗದಗ, ಕೊಪ್ಪಳ– ಸಿ.ಸಿ.ಪಾಟೀಲ, ಬಳ್ಳಾರಿ,ರಾಯಚೂರು–ಶ್ರೀರಾಮುಲು, ಯಾದಗಿರಿ–ಶ್ರೀರಾಮುಲು, ಪ್ರಭು ಚವ್ಹಾಣ್, ಚಿಕ್ಕಮಗಳೂರು– ಸಿ.ಟಿ.ರವಿ, ಜೆ.ಸಿ.ಮಾಧುಸ್ವಾಮಿ, ಕೊಡಗು– ಸುರೇಶ್‌ ಕುಮಾರ್‌, ಮೈಸೂರು– ಆರ್.ಅಶೋಕ್‌, ಚಾಮರಾಜನಗರ– ವಿ.ಸೋಮಣ್ಣ, ದಕ್ಷಿಣ ಕನ್ನಡ–ಉಡುಪಿ– ಶ್ರೀನಿವಾಸ ಪೂಜಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.