ಹುಬ್ಬಳ್ಳಿ: ನೂತನ ಪಿಂಚಣಿ ಯೋಜನೆಯಲ್ಲಿ ಮಾರ್ಪಾಡು ಮಾಡುವ ಕುರಿತು ಪರಿಶೀಲಿಸಲು ಸರ್ಕಾರ ಅಧಿಕಾರಿಗಳ ಸಮಿತಿಯನ್ನು ರಚಿಸಿ ಮೂರು ವರ್ಷಗಳಾಗಿದ್ದರೂ ಇದುವರೆಗೆ ವರದಿ ಸಲ್ಲಿಕೆಯಾಗದಿರುವುದಕ್ಕೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ನೂತನ ಪಿಂಚಣಿ ಯೋಜನೆಯ ಮಾರ್ಪಾಡು ಸಮಿತಿಯ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲೇನಿದೆ?:2006ಕ್ಕಿಂತ ಮುಂಚಿನ ಸರ್ಕಾರಿ, ಅನುದಾನಿತ ಸಿಬ್ಬಂದಿಯ ವೇತನ ಹಾಗೂ ಇತರ ಸೌಲಭ್ಯಗಳು ಒಂದೇ ರೀತಿಯಾಗಿದ್ದವು. ನೂತನ ಪಿಂಚಣಿ ಆದೇಶದಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯ ವಂತಿಗೆಯನ್ನು ಆಡಳಿತ ಮಂಡಳಿಗಳೇ ತುಂಬಬೇಕೆಂದು ಆದೇಶಿಸಲಾಗಿದೆ. ಇದರಿಂದಾಗಿ ಅಲ್ಲಿ ನೂತನ ಪಿಂಚಣಿ ಯೋಜನೆ ಜಾರಿಗೊಂಡಿಲ್ಲ.
ಅನುದಾನಿತ ಸಿಬ್ಬಂದಿಯ ಪಿಂಚಣಿ ಪಾವತಿಯನ್ನು ಆಡಳಿತ ಮಂಡಳಿಗಳಿಗೆ ವಹಿಸಿರುವುದು ಸಂವಿಧಾನ ವಿರೋಧಿ
ಯಾಗಿದೆಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.