ADVERTISEMENT

ಕಾಲಮೇಲೆ ಕಾಲು ಹಾಕಿ ಕೂರಲು ನಿರ್ಬಂಧವಿಲ್ಲ: ಹೈಕೋರ್ಟ್ ಜಂಟಿ ರಿಜಿಸ್ಟ್ರಾರ್

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 19:20 IST
Last Updated 20 ಜೂನ್ 2022, 19:20 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಕೋರ್ಟ್ ಕಲಾಪ ನಡೆಯುವ ವೇಳೆ ಹಾಲ್‌ನಲ್ಲಿ ಕಾಲಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದನ್ನು ನಿರ್ಬಂಧಿಸಲಾದ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಆದೇಶಗಳಿಲ್ಲ' ಎಂದು ಹೈಕೋರ್ಟ್ ಜಂಟಿ ರಿಜಿಸ್ಟ್ರಾರ್ ತಿಳಿಸಿದ್ದಾರೆ.

ಈ ಕುರಿತಂತೆ ಮಾಹಿತಿ ಹಕ್ಕು ಕಾರ್ಯಕರ್ತ ಟಿ.ನರಸಿಂಹಮೂರ್ತಿ ಕೇಳಿದ್ದ ಪ್ರಶ್ನೆಗೆ ಹೈಕೋರ್ಟ್ ಜಂಟಿ ರಿಜಿಸ್ಟ್ರಾರ್ ಲಿಖಿತ ಉತ್ತರ ನೀಡಿದ್ದಾರೆ.

‘ಕೋರ್ಟ್ ಕಲಾಪ ನಡೆಯು ವಾಗ ಹಾಲ್‌ನಲ್ಲಿ ನಾಗರಿಕರು ತಮ್ಮ ಕಾಲಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದರ ಕುರಿತಾಗಿ ಹೈಕೋರ್ಟ್ ಆದೇಶ, ತೀರ್ಪು, ಮಾರ್ಗದರ್ಶಿ ಸೂತ್ರ, ಅಧಿಸೂಚನೆ ಅಥವಾ ರಾಜ್ಯ ನಿರ್ದೇಶನಗಳೇ ನಾದರೂ ಇವೆಯೇ’ ಎಂದು ವಿವರ ಕೋರಿ ನರಸಿಂಹಮೂರ್ತಿ ಮಾಹಿತಿ ಹಕ್ಕು ಕಾಯ್ದೆಯಡಿ 2022ರ ಮೇ 27ರಂದು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಜಂಟಿ ರಿಜಿಸ್ಟಾರ್; ‘ಸಂಬಂಧಿತ ಕಚೇರಿ, ಧಾರವಾಡ, ಕಲಬುರ್ಗಿ ಪೀಠ ಗಳಿಂದ ಮಾಹಿತಿ ಪಡೆಯಲಾಗಿದ್ದು, ಅಂತಹ ಯಾವುದೇ ಆದೇಶಗಳಿಲ್ಲ’ ಎಂದು ಇದೇ 9ರಂದು ಪ್ರತ್ಯುತ್ತರ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.