ADVERTISEMENT

2 ವಿವಿ, 24 ಸಾಧಕರಿಗೆ ಎನ್ಎಸ್‌ಎಸ್‌ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 21:49 IST
Last Updated 6 ಸೆಪ್ಟೆಂಬರ್ 2022, 21:49 IST

ಬೆಂಗಳೂರು: ರಾಜ್ಯಮಟ್ಟದ2020-21ನೇ ಸಾಲಿನ ಎನ್‌ಎಸ್‌ಎಸ್ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನುಯುವ ಸಬಲೀಕರಣ ಇಲಾಖೆ ಮಂಗಳವಾರ ಪ್ರಕಟಿಸಿದೆ.

2 ಅತ್ಯುತ್ತಮ ವಿಶ್ವವಿದ್ಯಾಲಯ, 12 ಅತ್ಯುತ್ತಮ ಘಟಕ ಹಾಗೂ ಕಾರ್ಯಕ್ರಮ ಸಂಯೋಜನಾಧಿಕಾರಿಗಳು, 12 ಅತ್ಯುತ್ತಮ ಸ್ವಯಂಸೇವಕ, ಸೇವಕಿಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೆ.10ರಂದು ರಾಜಭವನದ ಗಾಜಿನಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಪ್ರಶಸ್ತಿ ಪ್ರದಾನ ಮಾಡುವರು. ದಶಕದ ನಂತರ ಈ ಕಾರ್ಯಕ್ರಮ ರಾಜಭವನದಲ್ಲಿ ನಡೆಯುತ್ತಿದೆ ಎಂದು ಸಚಿವ ಡಾ.ನಾರಾಯಣಗೌಡ ಮಾಹಿತಿ ನೀಡಿದರು.

ವಿಶ್ವವಿದ್ಯಾಲಯಗಳು: ಬೆಂಗಳೂರು ವಿಶ್ವವಿದ್ಯಾಲಯ (ಕುಲಪತಿ ಎಸ್‌.ಎಂ. ಜಯಕರ, ಕಾರ್ಯಕ್ರಮ ಸಂಯೋಜನಾಧಿಕಾರಿ ಎನ್‌.ಸತೀಶ್‌ ಗೌಡ), ಬೆಂಗಳೂರು ನಗರ ವಿಶ್ವವಿದ್ಯಾಲಯ (ಕುಲಪತಿ ಲಿಂಗರಾಜ ಗಾಂಧಿ,ಕಾರ್ಯಕ್ರಮ ಸಂಯೋಜನಾಧಿಕಾರಿ ಎಚ್‌.ಜಿ.ಗೋವಿಂದ ಗೌಡ).

ADVERTISEMENT

ಅತ್ಯುತ್ತಮ ಪುರುಷ ಕಾರ್ಯಕ್ರಮಾಧಿಕಾರಿಗಳು: ಎಂ.ಎಸ್‌.ಹಲಗೂರ, ಜೈನ್‌ ಪದವಿ ಕಾಲೇಜು, ಹುಬ್ಬಳ್ಳಿ, (ಮಾಯಾ ಕಲ್ಹಳ್ಳಿ, ಪ್ರಾಂಶುಪಾಲರು).ಎಚ್‌.ಎಸ್.ಯಲ್ಲೇಶ್‌ಕುಮಾರ್, ತೋಟಗಾರಿಕಾ ಕಾಲೇಜು, ಮೂಡಿಗೆರೆ (ನಾರಾಯಣ ಎಸ್‌.ಮಾವಾರ್ಕರ, ಪ್ರಾಂಶುಪಾಲ). ಸೋಮಶೇಖರ್ ಸಿ.ಕರಿಮನಿ, ಅಗಡಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜು, ಲಕ್ಷ್ಮೀಶ್ವರ, ಗದಗ (ಉದಯ ಕುಮಾರ್ ಎಸ್‌.ಹಂಪಣ್ಣನವರ್, ಪ್ರಾಂಶುಪಾಲ). ರೋಷನ್‌ ವಿನ್ಸಿ ಸಾಂತು ಮಾಯಾರ್, ಪಾದುವಾ ಕಾಲೇಜ್, ನಂತೂರು, ಮಂಗಳೂರು (ಅರುಣ ವಿಲ್ಸನ್‌ ಲೊಬೊ, ಪ್ರಾಂಶುಪಾಲ). ಎಂ.ಇಮ್ರಾನ್‌ ಪಾಶಾ, ಯೆನೆಪೊಯಾ ದಂತ ಕಾಲೇಜು, ದೇರಳಕಟ್ಟೆ, ಮಂಗಳೂರು (ಅಖ್ತರ್ ಹುಸೇನ್‌, ಪ್ರಾಂಶುಪಾಲ). ಸಿ.ಆರ್.ಕಿರಣ್‌ ಕುಮಾರ್, ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಣಸೂರು (ವೆಂಕಟೇಶಯ್ಯ, ಪ್ರಾಂಶುಪಾಲ). ಕೆ.ಲೋಕೇಶ್‌ ನಾಯ್ಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಭರಮಸಾಗರ (ಆರ್.ಮಹೇಶ್, ಪ್ರಾಂಶುಪಾಲ). ಎಂ.ವೆಂಕಟೇಶ್‌, ಡಿವಿಎಸ್‌ ಕಲಾ ಮತ್ತು ವಿಜ್ಞಾನ ಕಾಲೇಜು, ಶಿವಮೊಗ್ಗ, (ವೆಂಕಟೇಶ್‌, ಪ್ರಾಂಶುಪಾಲ).

ಅತ್ಯುತ್ತಮ ಮಹಿಳಾ ಕಾರ್ಯಕ್ರಮಾಧಿಕಾರಿಗಳು: ಜಿ.ಜ್ಯೋತಿ, ಸರ್ಕಾರಿ ವಿಜ್ಞಾನ ಕಾಲೇಜು, ಬೆಂಗಳೂರು (ರಾಮಕೃಷ್ಣ ರೆಡ್ಡಿ, ಪ್ರಾಂಶುಪಾಲ). ಕೆ.ಮಧುರಾ, ಕಾರ್ಮೆಲ್‌ ಕಾಲೇಜು, ಮೊಂಡಂಕಾಪು, ದ.ಕ (ಲತಾ ಫರ್ನಾಂಡಿಸ್‌, ಪ್ರಾಂಶುಪಾಲರು). ಬಿ.ಎನ್‌.ಹೇಮಲತಾ, ಡಿ ಪಾಲ್ ಪ್ರಥಮದರ್ಜೆ ಕಾಲೇಜು, ಅವ್ಹೇರಹಳ್ಳಿ, ಶ್ರೀರಂಗಪಟ್ಟಣ (ಸಿ.ಎಂ.ಬೈಜು ಆಂಟೊನಿ, ಪ್ರಾಂಶುಪಾಲ). ಬಿ.ಎನ್‌.ತಾರಾ, ಕೆಎಲ್‌ಇ ಮೃತ್ಯುಂಜಯ ಕಲಾ ಮತ್ತು ವಾಣಿಜ್ಯ ಕಾಲೇಜು, ಧಾರವಾಡ (ನೀಲಕ್ಕಾ ಸಿ.ಪಾಟೀಲ, ಪ್ರಾಂಶುಪಾಲರು).

ಅತ್ಯುತ್ತಮ ಸ್ವಯಂ ಸೇವಕರು: ಆರ್‌.ಪವನ್‌, ಎಎಸ್‌ಸಿ ಪದವಿ ಕಾಲೇಜು, ರಾಜಾಜಿ ನಗರ, ಬೆಂಗಳೂರು. ನಳಿನ್‌ ಪಟೀಲ್‌, ಗೋಗಟೆ ಎಂಜಿನಿಯರಿಂಗ್ ಕಾಲೇಜು, ಬೆಳಗಾವಿ. ಎಂ.ಮಲ್ಲಿಕಾರ್ಜುನ್‌, ಶೇಷಾದ್ರಿಪುರಂ ಸಂಜೆ ಕಾಲೇಜು, ಬೆಂಗಳೂರು. ಭಾನುಪ್ರಕಾಶ್‌, ವಿಶ್ವಶಾಂತಿ ಪ್ರಥಮ ದರ್ಜೆ ಕಾಲೇಜು, ಸಾಧನಪುರ, ಮೈಸೂರು. ಪ್ರದೀಪ, ರುಕ್ಮಿಣಿ ಶೆಡ್ತಿ ಕಾಲೇಜು, ಬಾರ್ಕೂರು, ಉಡುಪಿ. ಶಿವಯೋಗಿ ಹಾವೇರಿ, ಕಿಟೆಲ್‌ ವಿಜ್ಞಾನ ಕಾಲೇಜು, ಧಾರವಾಡ.

ಅತ್ಯುತ್ತಮ ಸ್ವಯಂ ಸೇವಕಿಯರು: ಪಿ.ಭಾವನಾ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಮಂಡ್ಯ. ಸಿ.ಡಿ.ರಕ್ಷಿತಾ, ಕಟೀಲ್‌ ಅಶೋಕ್‌ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ. ರಶ್ಮಿ ಜೆ.ಅಂಚನ್‌, ಗೋವಿಂದದಾಸ ಕಾಲೇಜು, ಸುರತ್ಕಲ್‌. ಅರ್ಪಣಾ ಎಸ್‌.ಪಾಟೀಲ, ಕೆಎಲ್‌ಇ ಔಷಧ ವಿಜ್ಞಾನ ಕಾಲೇಜು, ಬೆಳಗಾವಿ. ದೀಪಾ ಎನ್‌.ಅಂಗಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಡಗೇರಿ, ಧಾರವಾಡ, ಎನ್‌.ವಿದ್ಯಾ, ತೋಟಗಾರಿಕಾ ಕಾಲೇಜು, ಮೂಡಿಗೆರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.