ADVERTISEMENT

ಕಥೆಗಾರ್ತಿ, ಕವಯಿತ್ರಿ ತುಳಸಿ ವೇಣುಗೋಪಾಲ್‌ ನಿಧನ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 20:01 IST
Last Updated 9 ಏಪ್ರಿಲ್ 2019, 20:01 IST
ತುಳಸಿ
ತುಳಸಿ   

ಮಂಗಳೂರು: ಕಥೆಗಾರ್ತಿ, ಕವಯಿತ್ರಿ ತುಳಸಿ ವೇಣುಗೋಪಾಲ್‌ (65) ಸೋಮವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪುತ್ರ ಇದ್ದಾರೆ.

ನಗರದ ಬೋಳಾರದಲ್ಲಿ ಹುಟ್ಟಿದ ಅವರು, ಮದುವೆಯ ಬಳಿಕ ಮುಂಬೈಯಲ್ಲಿ ನೆಲೆಸಿದ್ದರು. ಕನ್ನಡ ಸಾಹಿತ್ಯದ ಬಗ್ಗೆ ಅವರಿಗಿದ್ದ ಒಲವು ಅಪಾರ. ಕಥೆ, ಕವನಗಳ ಮೂಲಕ ಸೂಕ್ಷ್ಮ ಸಂವೇದನೆಗಳಿಗೆ ಅಕ್ಷರ ರೂಪ ನೀಡುತ್ತ ಅವರು ಜೀವನ್ಮುಖಿಯಾಗಿದ್ದರು.

ಮುಂಬೈಯ ಸ್ಪಾರೋ ಸಂಸ್ಥೆ ಹೊರತಂದ ಮೌಖಿಕ ಸಂದರ್ಶನಗಳನ್ನು ಒಳಗೊಂಡ ಕನ್ನಡ ಅನುವಾದ ಸಂಗ್ರಹ ‘ಬೊಗಸೆಯಲ್ಲಿಷ್ಟು ಬೆಳಕು ತುಂಬಿ’ ಮತ್ತು ‘ಮುಗಿಲ ಮಲ್ಲಿಗೆ ಎಟುಕಿಸಿ’ ಕೃತಿಗಳ ಸಂಪಾದಕ ಬಳಗದಲ್ಲಿಯೂ ಕೆಲಸ ಮಾಡಿದ್ದಾರೆ. ‘ಸುಧಾ’, ‘ಮಯೂರ’, ‘ಪ್ರಜಾವಾಣಿ’ ಸೇರಿದಂತೆ ಅನೇಕ ನಿಯತಕಾಲಿಕೆಗಳಲ್ಲಿ ಅವರ ಕಥೆಗಳು ಪ್ರಕಟವಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.