ADVERTISEMENT

ಪರಿಷತ್ ಚುನಾವಣೆಯಲ್ಲಿ ಜಿ.ಟಿ ದೇವೇಗೌಡರಿಂದ ಮಾತ್ರ ಮತದಾನ: ಎಚ್‌ಡಿಕೆ ಏನಂತಾರೆ?

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 7:30 IST
Last Updated 17 ಫೆಬ್ರುವರಿ 2020, 7:30 IST
ಜಿ.ಟಿ‌. ದೇವೇಗೌಡ - ಎಚ್. ಡಿ. ಕುಮಾರಸ್ವಾಮಿ
ಜಿ.ಟಿ‌. ದೇವೇಗೌಡ - ಎಚ್. ಡಿ. ಕುಮಾರಸ್ವಾಮಿ   

ಬೆಂಗಳೂರು: ಕಾಂಗ್ರೆಸ್‌ನವರು ಮತದಾನದಲ್ಲಿ ಭಾಗವಹಿಸಲ್ಲ ಅಂತ ಸಂದೇಶ ಕೊಟ್ಟಿದ್ದರು. ಇದು ಉಪಯೋಗಕ್ಕೆ ಬರಲ್ಲ ಅಂತ ನಾವೂ ಕೂಡ ಭಾಗಿಯಾಗಿಲ್ಲ. ಜಿ.ಟಿ ದೇವೇಗೌಡ ಮತದಾನ ಮಾಡಿದ್ದು ನನಗೆ ಗೊತ್ತಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಈಗ ಅವರು ನಮ್ಮಲ್ಲಿ ಇದ್ದಾರಾ. ಅವರು ಹಲವಾರು ಹೇಳಿಕೆಗಳನ್ನು ಕೊಟ್ಟುಕೊಂಡಿದ್ದಾರೆ. ಇಲ್ಲಿರ್ತಾರೋ, ಎಲ್ಲಿರ್ತಾರೋ ಎಂದು ಕಾದು ನೋಡೋಣ. ಮತದಾನದಲ್ಲಿ ಭಾಗವಹಿಸೋದು ಬೇಡ ಎಂದು ಶಾಸಕಾಂಗ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದೇವೆ. ಶಾಸಕಾಂಗ ಪಕ್ಷಕ್ಕೆ ಅಗೌರವ ತೋರುವುದು ಅವರಿಗೆ ಬಿಟ್ಟದ್ದು ಎಂದು ತಿಳಿಸಿದರು.

ಜೆಡಿಎಸ್‌ನ ಜಿ.ಟಿ‌. ದೇವೇಗೌಡರಿಂದ ಮಾತ್ರ ಮತದಾನ

ADVERTISEMENT

ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಹೊರತುಪಡಿಸಿ ಇತರ ಯಾವ ಶಾಸಕರೂ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಿಲ್ಲ. ಸೋಮವಾರ ಬೆಳಗ್ಗೆ ನಡೆದ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಮತದಾನ ಮಾಡದಿರಲು ನಿರ್ಧರಿಸಲಾಗಿತ್ತು. ಆದರೆ ಶಾಸಕಾಂಗ ಪಕ್ಷದ ನಿರ್ಧಾರವನ್ನು ಧಿಕ್ಕರಿಸಿ ಜಿ.ಟಿ.ದೇವೇಗೌಡರು ಮತ ಚಲಾಯಿಸಿದರು. ಈ ಮಧ್ಯೆ ಉಮೇಶ್ ಕತ್ತಿ, ಬಸನಗೌಡ ಯತ್ನಾಳ ಸಹಿತ ಬಿಜೆಪಿಯ ಬಹುತೇಕ ಎಲ್ಲ ಶಾಸಕರು ಮತ ಚಲಾಯಿಸಿದರು.

ಅನಾರೋಗ್ಯದ ಕಾರಣ ರಾಮದಾಸ್,ಎನ್ ವೈ ಗೋಪಾಲಕೃಷ್ಣಹೊರತುಪಡಿಸಿ, ಇದುವರೆಗೆ 119 ಮಂದಿಪರಿಷತ್ ಉಪಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.