ADVERTISEMENT

ಹಳಿಯಾಳ: 25ರಿಂದ ಮುಕ್ತ ಕುಸ್ತಿ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 16:26 IST
Last Updated 22 ಜನವರಿ 2020, 16:26 IST
ಹಳಿಯಾಳದಲ್ಲಿ ಜ.25 ನಡೆಯಲಿರುವ ಕುಸ್ತಿ ಪಂದ್ಯಾವಳಿಗೆ ಕುಸ್ತಿ ಅಖಾಡ ಸಿದ್ಧಗೊಳ್ಳುತ್ತಿರುವುದು
ಹಳಿಯಾಳದಲ್ಲಿ ಜ.25 ನಡೆಯಲಿರುವ ಕುಸ್ತಿ ಪಂದ್ಯಾವಳಿಗೆ ಕುಸ್ತಿ ಅಖಾಡ ಸಿದ್ಧಗೊಳ್ಳುತ್ತಿರುವುದು   

ಹಳಿಯಾಳ:ಪಟ್ಟಣದಜಿಲ್ಲಾ ಕುಸ್ತಿ ಅಖಾಡಾದಲ್ಲಿಜ.25ರಿಂದ 27ರವರೆಗೆರಾಜ್ಯ, ರಾಷ್ಟ್ರಮಟ್ಟದ ಪುರುಷ ಹಾಗೂ ಮಹಿಳೆಯರ ಮುಕ್ತ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಈಪಂದ್ಯಾವಳಿಯುವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಕರ್ನಾಟಕ ರಾಜ್ಯ ಕುಸ್ತಿ ಅಸೋಸಿಯೇಷನ್ ಆಶ್ರಯದಲ್ಲಿ ನಡೆಯಲಿದೆ. ವಿವಿಧ ವಿಭಾಗಗಳಲ್ಲಿ ವಿಜೇತರಿಗೆ ಒಟ್ಟು₹20 ಲಕ್ಷಕ್ಕೂ ಮೇಲ್ಪಟ್ಟು ನಗದು ಬಹುಮಾನ, ಬೆಳ್ಳಿಗದೆ ಹಾಗೂ ಪ್ರಶಸ್ತಿ ಪತ್ರಗಳನ್ನು ನಿಗದಿ ಮಾಡಲಾಗಿದೆ.

ಪುರುಷರ 75 ಕೆ.ಜಿಗೂ ಮೇಲಿನವಿಭಾಗದಲ್ಲಿ ‘ಮಹಾನ್ ಭಾರತ ಕೇಸರಿ’ಗೆ ಪ್ರಥಮ ಬಹುಮಾನ ₹ 2.25 ಲಕ್ಷ, ದ್ವಿತೀಯ ಬಹುಮಾನ ₹ 1.10 ಲಕ್ಷ, ತೃತೀಯ ಬಹುಮಾನ ₹ 55 ಸಾವಿರ ಸಿಗಲಿದೆ. ಮಹಿಳೆಯರ55 ಕೆ.ಜಿಗೂ ಮೇಲಿನ ವಿಭಾಗದಲ್ಲಿ‘ವೀರರಾಣಿ ಚನ್ನಮ್ಮ ಭಾರತ ಕೇಸರಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಥಮ ಬಹುಮಾನ ₹ 50 ಸಾವಿರ, ದ್ವಿತೀಯ ₹ 25 ಸಾವಿರ, ತೃತೀಯ ಬಹುಮಾನ ₹ 15 ಸಾವಿರ ನಿಗದಿಯಾಗಿದೆ.

ADVERTISEMENT

ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯ 74 ಕೆ.ಜಿ ಮೇಲಿನವಿಭಾಗದ ‘ಕರ್ನಾಟಕ ಕಂಠೀರವ’,74 ಕೆ.ಜಿ ವಿಭಾಗದ ‘ಕರ್ನಾಟಕ ಕೇಸರಿ’,70 ಕೆ.ಜಿ ವಿಭಾಗದ ‘ಕರ್ನಾಟಕ ಕುಮಾರ’, 65 ಕೆ.ಜಿ ವಿಭಾಗದಲ್ಲಿ ‘ಕರ್ನಾಟಕ ಕಿಶೋರ’ ಪ್ರಶಸ್ತಿ, 61 ಕೆ.ಜಿ ಮತ್ತು57 ಕೆ.ಜಿ ವಿಭಾಗದಲ್ಲಿ ‘ಕರ್ನಾಟಕ ಚಾಂಪಿಯನ್’ ಪ್ರಶಸ್ತಿಯ ಪಂದ್ಯಾವಳಿಗಳು ನಡೆಯಲಿವೆ.

ಮಹಿಳೆಯರ ವಿಭಾಗದಲ್ಲಿ 59 ಕೆ.ಜಿಗೂ ಮೇಲಿನವರಿಗೆ‘ಒನಕೆ ಓಬವ್ವ’ ಪ್ರಶಸ್ತಿ, 59 ಕೆ.ಜಿ ವಿಭಾಗದಲ್ಲಿ ‘ಕರ್ನಾಟಕ ಕುಮಾರಿ’ ಪ್ರಶಸ್ತಿ, 55 ಕೆ.ಜಿ ವಿಭಾಗದಲ್ಲಿ ‘ಕರ್ನಾಟಕ ಕಿಶೋರಿ’ ಪ್ರಶಸ್ತಿ, 50 ಕೆ.ಜಿ ವಿಭಾಗದಲ್ಲಿ ‘ಕರ್ನಾಟಕ ಚಾಂಪಿಯನ್’ ಪ್ರಶಸ್ತಿಯ ಸ್ಪರ್ಧೆಗಳು ನಡೆಯಲಿವೆ.

ಆಹ್ವಾನಿತ ಕುಸ್ತಿ:ಅಂತರರಾಷ್ಟ್ರೀಯ ಕುಸ್ತಿ ಪಟುಗಳೂ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.

‘ಹಿಂದ್ ಕೇಸರಿ’, ‘ಭಾರತ ಕೇಸರಿ’ ಪ್ರಶಸ್ತಿ ವಿಜೇತ ಹರಿಯಾಣದ ಹಿತೇಶಕುಮಾರ, ‘ಕರ್ನಾಟಕ ಕೇಸರಿ’ ಹಾಗೂ ‘ಕರ್ನಾಟಕ ಕಂಠೀರವ’ ಪ್ರಶಸ್ತಿ ವಿಜೇತ ಕಾರ್ತಿಕ್ ಕಾಟೆ,ಇರಾನ್‌ನಪೊಯಾ ಕರೀಮ್ ರೆಹಮಾನ್ ಹಾಗೂ ಹೂಮನ್ ಘಸೆಮಲಿ ಘಂಬರಿಗೋರಜಿ ಅವರ ಆಹ್ವಾನಿತ ಕುಸ್ತಿ ಪಂದ್ಯಾವಳಿಗಳು ಜ.27ರಂದು ಮಣ್ಣಿನ ಅಖಾಡದ ಮೇಲೆ ನಿಕಾಲಿ ಕುಸ್ತಿ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಮೋ.9449624470 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.