ADVERTISEMENT

ಕೇಂದ್ರದ ಅಜೆಂಡಾಕ್ಕೆ ಮಣೆ ಹಾಕಲು ಪಠ್ಯದಲ್ಲಿ ‘ಭಾರತ’: ಖಂಡನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2023, 19:56 IST
Last Updated 26 ಅಕ್ಟೋಬರ್ 2023, 19:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಇಂಡಿಯಾ’ ಮತ್ತು ‘ಭಾರತ’ ಹೆಸರುಗಳು ಜನಮಾನಸದಲ್ಲಿಬೆರೆತು ಹೋಗಿವೆ. ಆದರೂ ಅಂಧ ರಾಷ್ಟ್ರೀಯ ಭಾವವನ್ನು ಪ್ರಚೋದಿಸಲು ಶಾಲಾ ಪಠ್ಯದಲ್ಲಿ ‘ಇಂಡಿಯಾ’ವನ್ನು ‘ಭಾರತ’ ಎಂದು ಬದಲಾಯಿಸಲು ಎನ್‌ಸಿಆರ್‌ಟಿ ಶಿಫಾರಸು ಮಾಡಿರುವುದು ಕೇಂದ್ರಸರ್ಕಾರದ ಅಜೆಂಡಾಕ್ಕೆ ಮಣೆ ಹಾಕುವಂತಿದೆ ಎಂದು ಎಐಡಿಎಸ್‌ಒ ಟೀಕಿಸಿದೆ.

ಈಗಾಗಲೇ ದೇಶದ ಸಂವಿಧಾನದಲ್ಲಿ ‘ಭಾರತ’ ಮತ್ತು ‘ಇಂಡಿಯಾ’ ಎರಡೂ ಹೆಸರುಗಳನ್ನು ಸ್ವೀಕರಿಸಲಾಗಿದೆ. ಹಾಗಾಗಿಕೇಂದ್ರದ ಅಜೆಂಡಾದ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದೆ.

ಒಂದೇ ಭಾಷೆ ಹೇರುವ ಮೂಲಕ ಕೇಂದ್ರ ಶಿಕ್ಷಣದ ಪ್ರಜಾತಾಂತ್ರಿಕ ಮೌಲ್ಯಗಳಿಗೆ ವಿರುದ್ಧವಾದ ಶಿಕ್ಷಣದ ಕೇಂದ್ರೀಕರಣಕ್ಕೆ ಮುಂದಾಗಿದೆ. ಶಿಕ್ಷಣದ ವೈಜ್ಞಾನಿಕ ಮತ್ತು ಧರ್ಮನಿರಪೇಕ್ಷ ಆಶಯಗಳಿಗೆ ವಿರುದ್ಧವಾಗಿ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಅಳವಡಿಸುವ ಶಿಫಾರಸು ಕೂಡ ಸಮಿತಿ ಮಾಡಿದೆ. ಇದು ದೇಶದ ಶಿಕ್ಷಣ ವ್ಯವಸ್ಥೆಯನ್ನು ಬಾಧಿಸುತ್ತಿರುವ ವಾಸ್ತವ ಸಮಸ್ಯೆಗಳಿಂದ ಗಮನವನ್ನು ವಿಚಲಿತಗೊಳಿಸುವ ಕ್ರಿಯೆ ಎಂದು ಅಖಿಲಭಾರತ ಡೆಮಾಕ್ರಟಿಕ್‌ ಸ್ಟೂಡೆಂಟ್‌ ಅಸೊಸಿಯೇಶನ್‌ (ಎಐಡಿಎಒ) ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.