ADVERTISEMENT

ನೇಕಾರ ಅಭಿವೃದ್ಧಿ ನಿಗಮ ರಚನೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 16:28 IST
Last Updated 20 ಮಾರ್ಚ್ 2023, 16:28 IST

ಬೆಂಗಳೂರು: ಹಿಂದುಳಿದ ವರ್ಗಗಳ ಪ್ರವರ್ಗ 2–ಎ ಪಟ್ಟಿಯಲ್ಲಿರುವ ನೇಕಾರ ಸಮುದಾಯದ 38 ಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ನೇಕಾರರ ಅಭಿವೃದ್ಧಿ ನಿಗಮ ರಚನೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

ದೇವಾಂಗ, ದೇವಾಂಗ್‌, ಕೋಷ್ಠಿ, ಹಟಗಾರ್‌, ಹಟಕಾರ್‌ ಜೇಡ್‌, ವಿಂಕಾರ್‌, ಜುಲೋಹಿ, ಹಲ್ಕಾತರ್‌, ಹಟಗಾರ್‌, ನೇಯ್ದೆ, ಕುರುಹಿನ ಶೆಟ್ಟಿ, ಕುರ್ನಿ, ಬಿಳಿಮಗ್ಗ, ತೊಗಟ, ತೊಗಟರು, ತೊಗಟಿಗ, ತೊಗಟವೀರ, ತೊಗಟಗೇರ, ತೊಗಟವೀರ ಕ್ಷತ್ರಿಯ, ತೊಗಜ ಪುಷ್ಪಾಂಜಲಿ, ಸೋಣಿಗ, ಜಂಖಾನ, ಐರಿ, ಅವಿರ್‌, ಸಾಲೆ, ಪಟ್ಟಸಾಲೆ, ಪದ್ಮಸಾಲೆ, ಪದ್ಮಶಾಲಿ, ಪದ್ಮಸಾಲಿ, ಸಾಲಿ, ಪಟ್ಟಸಾಲಿ, ಕೈಕೋಳನ್‌, ಸೆಂಗುಂದರ್‌, ನೇಯ್ಕಾರ್‌, ಜಾಡರ್‌, ಜಾಂದ್ರ, ಸ್ವಕುಳಸಾಳಿ ಮತ್ತು ಸ್ವಕುಳಸಾಳೆ ಸಮುದಾಯಗಳ ಅಭಿವೃದ್ಧಿಗಾಗಿ ಈ ನಿಗಮ ರಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT