ADVERTISEMENT

ಪೇಠಾ ಆಲೂರ: 700ಕ್ಕೂ ಅಧಿಕ ಜನರಿಗೆ ಜ್ವರ

​ಪ್ರಜಾವಾಣಿ ವಾರ್ತೆ
Published 12 ಮೇ 2021, 19:31 IST
Last Updated 12 ಮೇ 2021, 19:31 IST
ಪೇಠಾ ಆಲೂರ ಗ್ರಾಮಕ್ಕೆ ಭೇಟಿ ನೀಡಿದ ಆರೋಗ್ಯ ಸಿಬ್ಬಂದಿ ಸಮೀಕ್ಷೆ ನಡೆಸಿದರು
ಪೇಠಾ ಆಲೂರ ಗ್ರಾಮಕ್ಕೆ ಭೇಟಿ ನೀಡಿದ ಆರೋಗ್ಯ ಸಿಬ್ಬಂದಿ ಸಮೀಕ್ಷೆ ನಡೆಸಿದರು   

ಡಂಬಳ (ಗದಗ ಜಿಲ್ಲೆ): ಇಲ್ಲಿಗೆ ಸಮೀಪದ ಪೇಠಾ ಆಲೂರ ಗ್ರಾಮದಲ್ಲಿ ಸುಮಾರು 700ಕ್ಕೂ ಅಧಿಕ ಜನರು ಜ್ವರದಿಂದ ಬಳಲುತ್ತಿದ್ದು, ಗ್ರಾಮಸ್ಥರು ಆತಂಕದಲ್ಲಿ ದಿನ ದೂಡುತ್ತಿದ್ದಾರೆ.

ಒಂದು ವಾರದಲ್ಲಿ ಏಳು ಜನ ಸಾವನ್ನಪ್ಪಿದ್ದು, ಮೃತರಿಗೆ ಕೊರೊನಾ ಸೋಂಕು ಇರಲಿಲ್ಲ ಎನ್ನಲಾಗಿದೆ. ಗ್ರಾಮದಲ್ಲಿ 15 ಮಂದಿ ಕೋವಿಡ್ ರೋಗಿಗಳಿದ್ದು, ಅವರಲ್ಲಿ 14 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. ಒಬ್ಬರು ಹೋಂ ಐಸೊಲೇಶನ್‌ನಲ್ಲಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಅವರ ಆರೋಗ್ಯದ ಬಗ್ಗೆ ನಿಗಾ ಇರಿಸಿದ್ದಾರೆ.‌

ಊರಿನಲ್ಲಿರುವ ಅನೇಕರು ಜ್ವರದಿಂದ ಬಳಲುತ್ತಿರುವ ಕಾರಣ ಬುಧವಾರ ಮುಂಡರಗಿ ತಹಶೀಲ್ದಾರ್‌ ಆಶಪ್ಪ ಪೂಜಾರ ಹಾಗೂ ಡಿಎಚ್‌ಒ ಡಾ.ಸತೀಶ್‌ ಬಸರಿಗಿಡದ ಹಾಗೂ ವೈದ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದರು.

ADVERTISEMENT

‘ಗ್ರಾಮದಲ್ಲಿ ಬಹಳ ಜನರಿಗೆ ಜ್ವರ ಬಂದಿರುವುದರಿಂದ ಭಯದಲ್ಲಿ ಜೀವನ ಕಳೆಯುವಂತಾಗಿದೆ. ಜನರಿಗೆ ಅಗತ್ಯ ವ್ಯದ್ಯಕೀಯ ಸೌಲಭ್ಯ ದೊರೆಯುಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕು’ ಎಂದು ಸ್ಥಳೀಯ ನಿವಾಸಿ ಅಶೋಕರಡ್ಡಿ ಕಬ್ಬೇರಹಳ್ಳಿ ಆಗ್ರಹಿಸಿದರು.

‘ಜಿಲ್ಲಾ ವೈದ್ಯಾಧಿಕಾರಿ ನೇತೃತ್ವದಲ್ಲಿ ಕುಟುಂಬದ ಸಮೀಕ್ಷೆಪ್ರಗತಿಯಲ್ಲಿದೆ. ಅನಾರೋಗ್ಯದ ಕಾರಣಕ್ಕೆ ಸಂಬಂಧಿ ಸಿದಂತೆ ಮಾಹಿತಿ ಕಲೆ ಹಾಕಲಾಗುವುದು. ಅಂತಿಮವಾಗಿ ಜಿಲ್ಲಾ ವೈದ್ಯಾಧಿಕಾರಿ ವರದಿ ನೀಡುತ್ತಾರೆ‘ ಎಂದು ಟಿಎಚ್‌ಒ ಡಾ.ರಾಜೇಶ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.