ADVERTISEMENT

ಪಂ. ತೊರವಿಗೆ ಪುಟ್ಟರಾಜ ಸಮ್ಮಾನ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 22:15 IST
Last Updated 25 ಫೆಬ್ರುವರಿ 2023, 22:15 IST
ಪಂ. ವಿನಾಯಕ ತೊರವಿ
ಪಂ. ವಿನಾಯಕ ತೊರವಿ   

ಧಾರವಾಡ: ಗ್ವಾಲಿಯರ್ ಮತ್ತು ಕಿರಾಣಾ ಘರಾಣೆಯ ಹಿಂದೂಸ್ತಾನಿ ಗಾಯಕ ಪಂ.ವಿನಾಯಕ ತೊರವಿ ಅವರು 2023ನೇ ಸಾಲಿನ ಪುಟ್ಟರಾಜ ಸಮ್ಮಾನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುತ್ತಿರುವ ಈ ಪ್ರಶಸ್ತಿಯು ₹1ಲಕ್ಷ ನಗದು ಹಾಗೂ ಫಲಕ ಒಳಗೊಂಡಿದೆ. ಮಾರ್ಚ್ 3ರಂದು ಸಂಜೆ 5.30ಕ್ಕೆ ಇಲ್ಲಿನ
ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ನಡೆಯಲಿರುವ ಡಾ. ಪುಟ್ಟ
ರಾಜ ಗವಾಯಿ ಅವರ 109ನೇ ಜನ್ಮದಿನ ಕಾರ್ಯಕ್ರಮದಲ್ಲಿ ಸಂಗೀತೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಜಮಖಂಡಿಯ ಮಾರುತಿ ನಾವಲಗಿ ಅವರ ಶಹನಾಯಿ ವಾದನ, ಪಂ. ವಿನಾಯಕ ತೊರವಿ ಅವರ ಗಾಯನ ಅಂದು ನಡೆಯಲಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಪಂ. ಎಂ.ವೆಂಕಟೇಶ ಕುಮಾರ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.