ADVERTISEMENT

ಮಳೆಗಾಗಿ ಋಷ್ಯಶಂಗೇಶ್ವರ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ: ಡಿಕೆಶಿ, ನಾಯ್ಕ ಭಾಗಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 4:24 IST
Last Updated 6 ಜೂನ್ 2019, 4:24 IST
   

ಚಿಕ್ಕಮಗಳೂರು:ಮಳೆಗಾಗಿ ಪ್ರಾರ್ಥಿಸಿ ಶೃಂಗೇರಿ ತಾಲ್ಲೂಕಿನ ಕಿಗ್ಗಾದ ಋಷ್ಯಶಂಗೇಶ್ವರ ಸ್ವಾಮಿ ದೇಗುಲದಲ್ಲಿ ನಡೆದಪರ್ಜನ್ಯ ಜಪ, ವಿಶೇಷಪೂಜಾ ಕೈಂಕರ್ಯದಲ್ಲಿಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಭಾಗಿಯಾದರು.

ಈ ಸಂಬಂಧ ಬುಧವಾರ ಮಾಹಿತಿ ನೀಡಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌,‘ರಾಜ್ಯ ಸರ್ಕಾರದ ವತಿಯಿಂದ ಮಳೆಗಾಗಿ ಪ್ರಾರ್ಥಿಸಲು ಪುಣ್ಯಕ್ಷೇತ್ರ, ದೇಗುಲಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದೇವೆ. ಮಳೆ ದೇವರು ಎಂಬ ಇತಿಹಾಸವಿರುವ ತಾಲ್ಲೂಕಿನ ಕಿಗ್ಗಾದ ಋಷ್ಯಶೃಂಗೇಶ್ವರ ದೇಗುಲದಲ್ಲಿ ಗುರುವಾರ ನಸುಕಿನಲ್ಲಿ ಕೈಂಕರ್ಯ ನೆರವೇರಿಸಲಾಗುವುದು’ ಎಂದು ತಿಳಿಸಿದ್ದರು.

‘ರಾಜ್ಯದಲ್ಲಿ ಬರಗಾಲ ದೂರಾಗಿ ಉತ್ತಮ ಮಳೆಯಾಗಬೇಕು. ಜಲಾಶಯಗಳು, ಕೆರೆಕಟ್ಟೆಗಳು ಭರ್ತಿಯಾಗಬೇಕು. ಕುಡಿಯಲು, ಬೆಳೆಗಳಿಗೆ ನೀರಾಗಬೇಕೆಂದು ಪ್ರಾರ್ಥಿಸುತ್ತೇವೆ. ಈ ಹಿಂದೆ ಇಂಧನ ಸಚಿವನಾಗಿದ್ದಾಗ ಕಿಗ್ಗಾ ದೇಗುಲಕ್ಕೆ ಮೂರು ಬಾರಿ ಭೇಟಿ ನೀಡಿದ್ದೇನೆ. ಮಳೆ ದೇಗುಲ ಎಂದು ಪ್ರಸಿದ್ಧಿಯಾಗಿದೆ’ ಎಂದೂ ಹೇಳಿದ್ದರು.

ADVERTISEMENT
ಶ್ರೀಚಾಮರಾಜೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ

ಚಾಮರಾಜನಗರ:ಮಳೆಗಾಗಿ ಪ್ರಾರ್ಥಿಸಿ ನಗರದ ಶ್ರೀಚಾಮರಾಜೇಶ್ವರ ದೇವಾಲಯದಲ್ಲಿಯೂ ಪರ್ಜನ್ಯ ಜಪ ಹಾಗೂ ವಿಶೇಷ ಪೂಜೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.