ADVERTISEMENT

ಪಿಂಚಣಿ ಯೋಜನೆ ಸ್ಪಂದನೆ ಭರವಸೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 19:13 IST
Last Updated 13 ಡಿಸೆಂಬರ್ 2018, 19:13 IST

ಬೆಳಗಾವಿ: ಪಿಂಚಣಿ ಯೋಜನೆ ಕುರಿತು ರಾಜ್ಯ ಸರ್ಕಾರಿ ನೌಕರರ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಎನ್‌ಪಿಎಸ್‌ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವ ಕುರಿತ ಎಸ್‌.ಎಲ್‌. ಭೋಜೇಗೌಡರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎನ್‌ಪಿಎಸ್‌ ಸಾಧಕ– ಬಾಧಕ ಕುರಿತು ಬೇಗನೆ ವರದಿ ನೀಡಲು ಸೂಚಿಸಿದ್ದೇನೆ ಎಂದರು.

ಎನ್‌ಪಿಎಸ್‌ ರದ್ದು ಮಾಡಬೇಕು ಎಂದು ಬಹಳಷ್ಟು ಸದಸ್ಯರು ಒತ್ತಾಯಿಸಿದ್ದರು.

ADVERTISEMENT

ತಿದ್ದುಪಡಿ ಮಸೂದೆ ಅಂಗೀಕಾರ

ಬೆಳಗಾವಿ: ಕರ್ನಾಟಕ ಜೀವರಕ್ಷಕ ಮತ್ತು ವೈದ್ಯಕೀಯ ವೃತ್ತಿನಿರತರ (ತುರ್ತು ಸನ್ನಿವೇಶಗಳಲ್ಲಿ ರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆಯ ತಿದ್ದುಪಡಿಗೆ ಮಂಡಿಸಲಾದ ಮಸೂದೆಗೆ ವಿಧಾನಸಭೆಯಲ್ಲಿ ಗುರುವಾರ ಅನುಮೋದನೆ ನೀಡಲಾಯಿತು.

ಈ ಕಾಯ್ದೆಯಲ್ಲಿರುವ ‘ಗಾಯಾಳುವಿಗೆ ತುರ್ತು ನಿಗಾ ವಹಿಸುವಾಗ ಜೀವರಕ್ಷಕನಿಂದ ಆಗುವ ಲೋಪಕ್ಕೆ ಸದ್ಭಾವನೆಯಿಂದ ಗಾಯಾಳು ವ್ಯಕ್ತಪಡಿಸುವ ಸಮ್ಮತಿ’ ಎಂಬ ಅಂಶವನ್ನು ಕೈಬಿಡುವಂತೆ ರಾಷ್ಟ್ರಪತಿ ಸೂಚಿಸಿದ್ದರು. ಅದರಂತೆ, ಕಾಯ್ದೆ ತಿದ್ದುಪಡಿಗೆ ಮಸೂದೆ ಮಂಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.