ADVERTISEMENT

ಕೊಲೆ ಆರೋಪಿ ಬೈರಗೊಂಡಗೆ ಗೌರವ ಡಾಕ್ಟರೇಟ್‌

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 19:31 IST
Last Updated 1 ಸೆಪ್ಟೆಂಬರ್ 2019, 19:31 IST
ಮಹಾದೇವ ಸಾಹುಕಾರ ಭೈರಗೊಂಡ ಅವರಿಗೆ ಏಷಿಯನ್‌ ಇಂಟರ್‌ನ್ಯಾಷನಲ್‌ ಇಂಡೋನೇಷಿಯಾ ವಿ.ವಿ ಕರ್ನಾಟಕದ ಸಂಯೋಜಕ ಡಾ.ರಾಜು ರೋಖಡೆ ಗೌರವ ಡಾಕ್ಷರೇಟ್‌ ಪದವಿ ಪ್ರದಾನ ಮಾಡಿದರು
ಮಹಾದೇವ ಸಾಹುಕಾರ ಭೈರಗೊಂಡ ಅವರಿಗೆ ಏಷಿಯನ್‌ ಇಂಟರ್‌ನ್ಯಾಷನಲ್‌ ಇಂಡೋನೇಷಿಯಾ ವಿ.ವಿ ಕರ್ನಾಟಕದ ಸಂಯೋಜಕ ಡಾ.ರಾಜು ರೋಖಡೆ ಗೌರವ ಡಾಕ್ಷರೇಟ್‌ ಪದವಿ ಪ್ರದಾನ ಮಾಡಿದರು   

ವಿಜಯಪುರ: ಭೀಮಾತೀರದ ಎರಡು ಕೊಲೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿ, ಈಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಹಾದೇವ ಸಾಹುಕಾರ ಬೈರಗೊಂಡಗೆ ಏಷಿಯನ್‌ ಇಂಟರ್‌ನ್ಯಾಷನಲ್‌ ಇಂಡೋನೆಷಿಯಾ ವಿಶ್ವವಿದ್ಯಾಲಯವು ಈಚೆಗೆ ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿದೆ!

ಬೈರಗೊಂಡ ಅವರು ಭೀಮಾತೀರದ ಧರ್ಮರಾಜ ಚಡಚಣ ಕೊಲೆ ಹಾಗೂ ಗಂಗಾಧರ ಚಡಚಣ ನಾಪತ್ತೆ ಮತ್ತು ನಿಗೂಢ ಕೊಲೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿ.

ಕೆರೂರ ಗ್ರಾಮದ ಬೈರವನಾಥ ಶಿಕ್ಷಣ ಸಂಸ್ಥೆಯಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಏಷಿಯನ್‌ ಇಂಟರ್‌ ನ್ಯಾಷನಲ್‌ ಇಂಡೋನೇಷಿಯಾವಿಶ್ವವಿದ್ಯಾಲಯದ ಕರ್ನಾಟಕದ ಸಂಯೋಜಕ ಡಾ.ರಾಜು ರೋಖಡೆ ಅವರು ಬೈರಗೊಂಡ ಅವರ ‘ಸಮಾಜ ಸೇವೆ’ಗಾಗಿ ಪದವಿ ಪ್ರದಾನ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.