ADVERTISEMENT

ಸಿದ್ದರಾಮಯ್ಯ ಈ ಮಟ್ಟಕ್ಕೆ ಇಳಿಯಬಾರದಿತ್ತು: ರಮೇಶ್‌ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 7:00 IST
Last Updated 10 ಜುಲೈ 2019, 7:00 IST
   

ಬೆಂಗಳೂರು: ‘ಸಿದ್ದರಾಮಯ್ಯನವರು ಈ ಮಟ್ಟಕ್ಕೆ ಇಳಿಯಬಾರದಿತ್ತು.ರಾಜೀನಾಮೆ ಸ್ವೀಕರಿಸಿದ ನಂತರವೇ ನಾವು ವಾಪಸ್‌ ಬರುತ್ತೇವೆ’ ಎಂದು ಅತೃಪ್ತ ಶಾಸಕರಾದ ರಮೇಶ್‌ ಜಾರಕಿಹೊಳಿತಿಳಿಸಿದರು.

ಮುಂಬೈನ ರೆನೈಸನ್ಸ್‌ ಹೋಟೆಲ್‌ನಲ್ಲಿ ಅತೃಪ್ತ ಶಾಸಕರು ವಾಸ್ತವ್ಯ ಹೂಡಿದ್ದಾರೆ.

‘ನಮಗೆ ಯಾವತ್ತಿದ್ದರೂ ಸಿದ್ದರಾಮಯ್ಯ, ಖರ್ಗೆ ಅವರೇ ನಾಯಕರು. ನಾವು ಕಾಂಗ್ರೆಸ್‌ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಮುಂಬೈನಲ್ಲಿ ಅವಮಾನ ಆಗುವುದಕ್ಕೂ ಮುನ್ನ ದಯವಿಟ್ಟು ವಾಪಸ್‌ ಹೋಗಿ. ಶಿವಲಿಂಗೇಗೌಡ ನಮ್ಮ ಸ್ನೇಹಿತರೇ. ಆದರೆ, ನಮ್ಮ ಮನಸ್ಸು ಸರಿಯಿಲ್ಲ. ನಾವು ಯಾರೊಂದಿಗೂ ಮಾತನಾಡುವುದಿಲ್ಲ’ ಎಂದು ಹೇಳಿದರು.

ADVERTISEMENT

‘ಯಾರಿಂದ, ಯಾಕಾಗಿ ಈ ಸ್ಥಿತಿ ನಿರ್ಮಾಣ ಆಯಿತು ಎಂದು ನಾನು ಬೆಂಗಳೂರಿಗೆ ವಾಪಸ್‌ ಬಂದ ನಂತರ ಪತ್ರಿಕಾಗೋಷ್ಠಿ ಕರೆದು ಮಾತನಾಡುತ್ತೇನೆ. ಈಗ ನಮ್ಮ ಪಾಡಿಗೆ ಬಿಟ್ಟು ಬಿಡಿ’ ಎಂದರು.

‘ರಾಜಕಾರಣದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ.ಎಲ್ಲರೂ ಒಂದೇ ಕಡೆ ಇದ್ದೇವೆ. ರಾಜಕಾರಣದ ವಿಷಯವಾಗಿ ನಾವುಯಾರನ್ನು ಭೇಟಿಯಾಗುವುದಿಲ್ಲ ಎಂದು ಮಾಧ್ಯಮ ಮೂಲಕ ಹೇಳಿದ್ದೇವೆ. ಬೆಂಗಳೂರಿಗೆ ಬಂದ ನಂತರ ಅವರಿಗೆ ವಸ್ತು ಸ್ಥಿತಿಯನ್ನು ಹೇಳುತ್ತೇವೆ’ ಎಂದು ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

‘ಬೆಂಗಳೂರಿನಲ್ಲೂ ನಾವು ಅವರೊಂದಿಗೆ ಮಾತನಾಡಿದ್ದೆವು. ಈಗಇಷ್ಟು ಆಸಕ್ತಿ ತೆಗೆದುಕೊಳ್ಳುತ್ತಿರುವವರು 15 ದಿನಗಳ ಹಿಂದೆ ತೆಗೆದುಕೊಂಡಿದ್ದರೆ, ಇದೆಲ್ಲ ಆಗುತ್ತಿರಲಿಲ್ಲ.ಅವರ ಮನೆಗೆ ಹೋಗಿ ಖುದ್ದಾಗಿ ಹೇಳಿದ್ದೇವೆ, ಆಗ ನಿರ್ಲಕ್ಷಿಸಿದರು. ಈಗ ಮುಂಬೈಗೆ ಬಂದರೆ, ನಾವೇನು ಮಾಡಲು ಆಗುವುದಿಲ್ಲ. ನಾವು ಅದೆಲ್ಲವನ್ನೂ ಮೀರಿ ಬಂದಿದ್ದೇವೆ’ಎಂದರು.

‘ಬೇರೆ ರಾಜಕೀಯ ಪಕ್ಷದವರು ನಮ್ಮನ್ನು ಭೇಟಿಯಾಗಲು ಬಂದಾಗ ಅವರಿಗೆ ನಾವು ಅವಕಾಶ ನೀಡಿರಲಿಲ್ಲ. ಹಾಗಾಗಿ ಇವರಿಗೂ ನೀಡುವುದಿಲ್ಲ. ರಾಜೀನಾಮೆಯಿಂದ ಹಿಂದೆ ಸರಿಯುವ ನಿರ್ಧಾರವೇ ಇಲ್ಲ’ಎಂದು ಸ್ಪಷ್ಟಪಡಿಸಿದರು.

‘ಸಮ್ಮಿಶ್ರ ಸರ್ಕಾರವನ್ನು ಧಿಕ್ಕರಿಸಿ ನಾವು ಇಲ್ಲಿಗೆ ಬಂದಿದ್ದೇವೆ. ಅವರು ನಮ್ಮನ್ನು ಕೇಳಿ ಇಲ್ಲಿಗೆ ಬರಬೇಕಿತ್ತು. ನಮ್ಮದೇ ಹೋಟೆಲ್‌ ಇದೆ ಅಲ್ಲಿ ಶಿವಕುಮಾರ್‌ ಅವರಿಗೆ ಆತಿಥ್ಯ ನೀಡುತ್ತೇವೆ ಬಿಡಿ’ ಎಂದು ಶಾಸಕ ನಾರಾಯಣಗೌಡ ಟಾಂಗ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.