ADVERTISEMENT

ತಲ್ಲಣ ಸೃಷ್ಟಿಸಿದ ನಾಲ್ವರ ವಿಚಾರಣೆ

‘ಅನುಮಾನಾಸ್ಪದರಲ್ಲ, ಅಮಾಯಕರು’ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 12:02 IST
Last Updated 13 ಸೆಪ್ಟೆಂಬರ್ 2019, 12:02 IST

ಕಾರವಾರ: ‘ನಗರದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ದೆಹಲಿಯ ನಾಲ್ವರನ್ನುಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರನ್ನು ಡಿವೈಎಸ್‌ಪಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ’ ಎಂಬ ಸುದ್ದಿಯೊಂದುಶುಕ್ರವಾರ ಬೆಳಿಗ್ಗೆಜಿಲ್ಲೆಯಲ್ಲಿಹರಡಿ,ತಲ್ಲಣ ಸೃಷ್ಟಿಸಿತು. ಕೊನೆಗೆ, ‘ಅವರುಅಮಾಯಕರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಸ್ಪಷ್ಟನೆ ನೀಡಿದರು.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದಡಿವೈಎಸ್‌ಪಿ ಶಂಕರ್ ಮಾರಿಹಾಳ, ‘ನಾಲ್ವರನ್ನು ವಿಚಾರಣೆ ನಡೆಸಿರುವುದು ನಿಜ. ಆದರೆ, ಅವರು ಕಾಶ್ಮೀರದ ಕುಪ್ವಾರದವರು. ಮುಂಬೈನಲ್ಲಿ ಕೆಲವು ವರ್ಷಗಳಿಂದ ವಾಸವಿದ್ದರು. ಅಲ್ಲಿ ಮಳೆ ಹೆಚ್ಚಿದ್ದ ಕಾರಣ ನಗರಕ್ಕೆ ವಲಸೆ ಬಂದಿದ್ದರು. ಇಲ್ಲಿ ಕೆಲವು ಅಂಗಡಿ, ಮನೆಗಳಲ್ಲಿ ಚಂದಾ ವಸೂಲಿ ಮಾಡಿಕೊಂಡು, ಊಟ, ವಸತಿಗೃಹದ ವೆಚ್ಚ ಸರಿದೂಗಿಸಿಕೊಳ್ಳುತ್ತಿದ್ದರು. ಈ ಮುಂಚೆ ಹೈಲರ್ಟ್ ಘೋಷಿಸಿದ್ದರಿಂದ, ಜತೆಗೆ ಕಾಶ್ಮೀರದವರು ಎಂಬ ಕಾರಣದಿಂದ ವಿಚಾರಣೆ ನಡೆಸಿದೆವು’ ಎಂದು ಸ್ಪಷ್ಟಪಡಿಸಿದರು.

‘ನಾಲ್ವರೂ ಅಮಾಯಕರು.ಮುಂಬೈನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಅಲ್ಲೇ ವಾಸಿಸುತ್ತಿದ್ದರು. ಇಲ್ಲಿಗೂ ಪ್ರತಿವರ್ಷ ಬಂದು ಹೋಗುತ್ತಿದ್ದರು.ಮಸೀದಿ, ಮನೆಗಳಿಗೆ ತೆರಳಿಚಂದಾ ಹಣ ಪಡೆಯುತ್ತಿದ್ದರು. ಸದ್ಯ ವಿಚಾರಣೆ ನಡೆಸಿ ಅವರನ್ನು ಬಿಟ್ಟಿದ್ದೇವೆ’ ಎಂದುಶಿವಪ್ರಕಾಶ್ ದೇವರಾಜು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.