ADVERTISEMENT

ಇನ್‌ಸ್ಪೆಕ್ಟರ್‌ರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 16:40 IST
Last Updated 20 ಜನವರಿ 2022, 16:40 IST

ಬೆಂಗಳೂರು: ದೂರು ನೀಡಲು ಹೋದಾಗ ಹೆಣ್ಣೂರು ಠಾಣೆಯ ಇನ್‌ಸ್ಪೆಕ್ಟರ್‌ ವಸಂತ್‌ಕುಮಾರ್‌ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಆದೇಶಿಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಿರುವ ಕಮಲ್‌ ಪಂತ್‌, ತನಿಖೆಯ ಹೊಣೆಯನ್ನು ಪೂರ್ವ ವಿಭಾಗದ ಡಿಸಿಪಿ ಎಸ್‌.ಡಿ.ಶರಣಪ್ಪ ಅವರಿಗೆ ವಹಿಸಿದ್ದಾರೆ.

‘ಮನೆಯಲ್ಲಿ ಭೋಗ್ಯಕ್ಕೆ ಇದ್ದವರು ಹಲ್ಲೆ ನಡೆಸಿದ್ದರ ಕುರಿತು ದೂರು ನೀಡಲು ಹೋದಾಗ ಇನ್‌ಸ್ಪೆಕ್ಟರ್‌ ಅಸಭ್ಯವಾಗಿ ವರ್ತಿಸಿದ್ದರು. ಪ್ರತಿವಾದಿಗಳಿಗೆ ಕುಮ್ಮಕ್ಕು ನೀಡಿ ನನ್ನ ಮೇಲೆ ಪ್ರತಿದೂರು ದಾಖಲಿಸುವಂತೆ ಮಾಡಿದ್ದರು. ದೌರ್ಜನ್ಯ ಪ್ರಕರಣವನ್ನೂ ದಾಖಲಿಸಿದ್ದರು. ಜಾಮೀನು ಪಡೆದಿದ್ದರೂ ಪದೇ ಪದೇ ಠಾಣೆಗೆ ಕರೆಯುತ್ತಿದ್ದರು. ಕೊಠಡಿಗೆ ಕರೆದು ಕೈ ಹಿಡಿದು ಎಳೆದಾಡಿದ್ದರು. ನೀನು ನನಗೆ ಬೇಕೇ ಬೇಕು. ಕರೆದಲ್ಲೆಲ್ಲಾ ಬರಬೇಕು ಎಂದು ಪೀಡಿಸುತ್ತಿದ್ದಾರೆ’ ಎಂದು ಸಂತ್ರಸ್ತ ಮಹಿಳೆಯು ಪೊಲೀಸ್‌ ಕಮಿಷನರ್‌ಗೆ ಬರೆದ ಪತ್ರದಲ್ಲಿ ಅಳಲು ತೋಡಿಕೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.