ADVERTISEMENT

ಠಾಣೆಯಲ್ಲಿ ಪೊಲೀಸರಿಂದ ಥಳಿತ: ವಿಡಿಯೊ ವೈರಲ್‌

ಕೇರಳದ ಯುವಕರಿಂದ ಅಸಭ್ಯ ವರ್ತನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 17:11 IST
Last Updated 22 ಜೂನ್ 2019, 17:11 IST
ಸಿದ್ದಾಪುರ ಸಮೀಪದ ಪಾಲಿಬೆಟ್ಟದ ಉಪ ಠಾಣೆಯಲ್ಲಿ ಯುವಕರಿಗೆ ಪೊಲೀಸರು ಥಳಿಸಿದ ದೃಶ್ಯ
ಸಿದ್ದಾಪುರ ಸಮೀಪದ ಪಾಲಿಬೆಟ್ಟದ ಉಪ ಠಾಣೆಯಲ್ಲಿ ಯುವಕರಿಗೆ ಪೊಲೀಸರು ಥಳಿಸಿದ ದೃಶ್ಯ   

ಸಿದ್ದಾಪುರ (ಕೊಡಗು ಜಿಲ್ಲೆ): ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟದ ಉಪ ಠಾಣೆಯಲ್ಲಿ, ಇಬ್ಬರು ಯುವಕರನ್ನು ಪೊಲೀಸರು ಥಳಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕೇರಳದ ಮಲ್ಲಂ‍ಪುರಂನ ಯುವಕನೊಬ್ಬ ಪಾಲಿಬೆಟ್ಟ ವ್ಯಾಪ್ತಿಯ ವಿದ್ಯಾರ್ಥಿನಿಯೊಬ್ಬಳನ್ನು ಫೇಸ್‌ಬುಕ್‌ ಮೂಲಕ ಪರಿಚಯ ಮಾಡಿಕೊಂಡಿದ್ದ. ಜೂನ್‌ 18ರಂದು ಆಕೆಯ ಜನ್ಮದಿನ ಆಚರಣೆಗೆಂದು ತನ್ನ ಸ್ನೇಹಿತನೊಂದಿಗೆ ಕೇರಳದಿಂದ ಬಂದಿದ್ದ ಯುವಕ, ಕಾಲೇಜು ಆವರಣದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ. ಅದನ್ನು ಗಮನಿಸಿದ ಕಾಲೇಜಿನ ಪ್ರಾಚಾರ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿಯೇ ಗ್ರಾಮಸ್ಥರು ಇಬ್ಬರನ್ನೂ ಹಿಗ್ಗಾಮುಗ್ಗಾ ಥಳಿಸಿದ್ದರು. ಬಳಿಕ ಠಾಣೆಗೆ ಕರೆದೊಯ್ದಿದ್ದ ಪೊಲೀಸರು ಸಹ ಲಾಠಿ ರುಚಿ ತೋರಿಸಿದ್ದರು. ಆಮೇಲೆ ಇಬ್ಬರಿಗೂ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು ಎನ್ನಲಾಗಿದೆ.

ADVERTISEMENT

ಅಂದು ಠಾಣೆಯ ಬಳಿಗೆ ತೆರಳಿದ್ದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು, ಪೊಲೀಸರು ಥಳಿಸುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಅದನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.