ADVERTISEMENT

ಪ್ರಜಾವಾಣಿ ಫೋನ್ ಇನ್: SSLC, PU ಪರೀಕ್ಷೆ ನಿರ್ಭೀತಿಯಿಂದ ಎದುರಿಸುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 15:23 IST
Last Updated 19 ಫೆಬ್ರುವರಿ 2026, 15:23 IST
ಫೋನ್ ಇನ್ ಲೊಗೊ
ಫೋನ್ ಇನ್ ಲೊಗೊ   

ಬೆಂಗಳೂರು: ಎಸ್‌ಎಸ್ಎಲ್‌ಸಿ, ಪಿಯು ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆ ಎದುರಿಸುವುದು ಹೇಗೆ? ಎಂಬ ವಿಚಾರದ ಕುರಿತು ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮ ಶನಿವಾರ (ಫೆ.21ರಂದು) ನಡೆಯಲಿದೆ.

ಮಧ್ಯಾಹ್ನ 12.30 ರಿಂದ 1.30 ಗಂಟೆಯವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷ ಪ್ರಕಾಶ್‌ ನಿಟ್ಟಾಲಿ, ನಿರ್ದೇಶಕ ಎಚ್.ಎನ್‌. ಗೋಪಾಲಕೃಷ್ಣ ಅವರು ಭಾಗವಹಿಸಲಿದ್ದಾರೆ.

ಸುಗಮವಾಗಿ ಪರೀಕ್ಷೆ ನಡೆಸಲು ಏನೆಲ್ಲ ವ್ಯವಸ್ಥೆ ಕೈಗೊಳ್ಳಲಾಗಿದೆ?, ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಎದುರಿಸಲು ಏನು ಮಾಡಬೇಕು?, ವೆಬ್‌ಕಾಸ್ಟಿಂಗ್‌ ಆತಂಕ ನಿವಾರಿಸಲು ಪ್ರಯತ್ನಗಳೇನು?, ಪರೀಕ್ಷೆ–1 ಎಲ್ಲರೂ ಬರೆಯುವುದು ಕಡ್ಡಾಯವೇ? ಹಾಗೂ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಏನೆಲ್ಲ ತರಬಹುದು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

ADVERTISEMENT

ವಿದ್ಯಾರ್ಥಿಗಳು, ಪೋಷಕರು 08045557230 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಪ್ರಶ್ನೆಗಳನ್ನು ಕೇಳಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.