ADVERTISEMENT

ಖಾಸಗೀಕರಣದಿಂದ ಭವಿಷ್ಯದಲ್ಲಿ ಮೀಸಲಾತಿ ಮಾಯ

ಸಾಹಿತಿ ಬರಗೂರು ರಾಮಚಂದ್ರಪ್ಪ ಕಳವಳ

​ಪ್ರಜಾವಾಣಿ ವಾರ್ತೆ
Published 9 ಮೇ 2022, 16:20 IST
Last Updated 9 ಮೇ 2022, 16:20 IST
ಕಾರ್ಯಕ್ರಮದಲ್ಲಿ (ಎಡದಿಂದ ಮೂರನೆಯವರು) ಬರಗೂರು ರಾಮಚಂದ್ರಪ್ಪ ಮತ್ತು ಎಲ್.ಹನುಮಂತಯ್ಯ ಚರ್ಚಿಸಿದರು. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಕರ್ನಾಟಕ ಘಟಕದ ಅಧ್ಯಕ್ಷ ಆರ್.ಮೋಹನ್‌ ರಾಜ್, ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಚಾಲಕ ರಾಜು ಎಂ.ತಳವಾರ್,  ದಲಿತ ಮಹಿಳಾ ಒಕ್ಕೂಟದ ಆದಿಲಕ್ಷ್ಮಿ ಇದ್ದಾರೆ –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ (ಎಡದಿಂದ ಮೂರನೆಯವರು) ಬರಗೂರು ರಾಮಚಂದ್ರಪ್ಪ ಮತ್ತು ಎಲ್.ಹನುಮಂತಯ್ಯ ಚರ್ಚಿಸಿದರು. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಕರ್ನಾಟಕ ಘಟಕದ ಅಧ್ಯಕ್ಷ ಆರ್.ಮೋಹನ್‌ ರಾಜ್, ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಚಾಲಕ ರಾಜು ಎಂ.ತಳವಾರ್,  ದಲಿತ ಮಹಿಳಾ ಒಕ್ಕೂಟದ ಆದಿಲಕ್ಷ್ಮಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದಲ್ಲಿ ಖಾಸಗೀಕರಣ ಮತ್ತು ಗುತ್ತಿಗೆ ಪದ್ಧತಿ ಹೆಚ್ಚಾಗುತ್ತಿದೆ. ಇದರಿಂದಾಗಿ ದಲಿತರು ಹೋರಾಟ ಮಾಡುತ್ತಿರುವ ಮೀಸಲಾತಿಯೇ ಮುಂದೊಂದು ದಿನ ಮರೆಯಾಗಲಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ (ಭೀಮವಾದ) ಭಾನುವಾರ ಆಯೋಜಿಸಿದ್ದ ಪದಾಧಿಕಾರಿಗಳ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಬಂಡವಾಳಶಾಹಿ ಪ್ರಭುತ್ವಇಂದು ದೇಶವನ್ನು ಆಳುತ್ತಿದೆ.ಆರ್ಥಿಕ ಖಾಸಗೀಕರಣದ ಅಪಾಯಗಳ ಬಗ್ಗೆ ದಲಿತ ಚಳವಳಿಗಳು ಜಾಗೃತಗೊಳ್ಳಬೇಕು.ದಲಿತ ಪ್ರಜ್ಞೆ ಸಾಮಾಜಿಕ, ಆರ್ಥಿಕ ಪ್ರಭುತ್ವಗಳ ಅನಿಷ್ಠಗಳು ಹಾಗೂಧಾರ್ಮಿಕ ಮೂಲಭೂತವಾದವನ್ನೂಏಕಕಾಲಕ್ಕೆ ವಿರೋಧಿಸಬೇಕು’ ಎಂದರು.

ADVERTISEMENT

ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ,‘ಬೇರೆ ಜಾತಿಯವರ ಹೋರಾಟ ಒಂದು ಹಂತ ತಲುಪಿದೆ. ಆದರೆ, ದಲಿತರ ಹೋರಾಟ ಆರಂಭಗೊಂಡು ನಾಲ್ಕು ದಶಕಗಳು ಕಳೆದರೂ ಮೊದಲ ಸ್ಥಿತಿಯಲ್ಲೇ ಇದೆ. ಲಕ್ಷಾಂತರ ಹಳ್ಳಿಗಳಲ್ಲಿ ಜಾತಿ ಅಸಮಾನತೆ ಜೀವಂತವಾಗಿದೆ’ ಎಂದರು.

‘ಹಿಜಾಬ್ ವಿಚಾರ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತದೆ. ಆದರೆ, ದಲಿತರ ಮೇಲಾಗುವ ದೌರ್ಜನ್ಯಗಳು ಹೆಚ್ಚು ಮಹತ್ವ ಪಡೆದುಕೊಳ್ಳುವುದಿಲ್ಲ.ದಲಿತರ ಮೇಲೆ ದೌರ್ಜನ್ಯವಾದರೆ ಅದರ ಪರಿಣಾಮ ಹೀಗೂ ಇರುತ್ತದೆ ಎಂದು ದೌರ್ಜನ್ಯ ಮಾಡುವವರಿಗೆ ಅರಿವಾಗಬೇಕು. ಆ ರೀತಿಯ ವಾತಾವರಣ ಸೃಷ್ಟಿಸಲು ದಲಿತರೆಲ್ಲ ಸಜ್ಜಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.