ADVERTISEMENT

ವಾಟ್ಸ್‌ಆ್ಯಪ್ ಯುನಿವರ್ಸಿಟಿಯಿಂದ ಆರಗ ಮಾಹಿತಿ ಪಡೆಯಬಾರದು: ಪ್ರಿಯಾಂಕ್‌ ಖರ್ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಏಪ್ರಿಲ್ 2022, 15:46 IST
Last Updated 6 ಏಪ್ರಿಲ್ 2022, 15:46 IST
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ   

ಬೆಂಗಳೂರು: ಗೃಹ ಸಚಿವರಾದವರು ಪೊಲೀಸರಿಂದ ಮಾಹಿತಿ ಪಡೆಯಬೇಕೆ ಹೊರತು ವಾಟ್ಸ್‌ಆ್ಯಪ್ ಯುನಿವರ್ಸಿಟಿಯಿಂದಲ್ಲ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಹರಿಹಾಯ್ದಿದ್ದಾರೆ.

ಗೋರಿಪಾಳ್ಯದಲ್ಲಿ ನಡೆದ ಕೊಲೆ ವಿಚಾರವಾಗಿ ಮಾತನಾಡಿದ್ದ ಆರಗ ಜ್ಞಾನೇಂದ್ರ ಅವರು, 'ಚಂದ್ರು ದಲಿತ ಸಮುದಾಯಕ್ಕೆ ಸೇರಿದ ಯುವಕ. ಸೋಮವಾರ ತಡರಾತ್ರಿ ಆತನನ್ನು ಅಡ್ಡಗಟ್ಟಿದ್ದ ಗುಂಪೊಂದು ಉರ್ದು ಮಾತಾಡುವಂತೆ ಒತ್ತಾಯಿಸಿತ್ತು. ಆತನಿಗೆ ಉರ್ದು ಬರುತ್ತಿರಲಿಲ್ಲ. ಹೀಗಾಗಿ ಚೂರಿಯಿಂದ ಚುಚ್ಚಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ' ಎಂದು ಹೇಳಿದ್ದರು. ಈ ಹೇಳಿಕೆಯು ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ‘ಚಂದ್ರುವಿನ ಕೊಲೆಯು ದ್ವಿಚಕ್ರ ವಾಹನ ಅಪಘಾತದ ವಿಚಾರವಾಗಿ ನಡೆದಿದ್ದು’ ಎಂದು ಆರಗ ಸ್ಪಷ್ಟನೆ ನೀಡಿದ್ದರು.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಿಯಾಂಕ್‌ ಖರ್ಗೆ, ‘ಆರಗ ಜ್ಞಾನೇಂದ್ರ ಅವರದ್ದು ಅಚಾತುರ್ಯ ಅಲ್ಲ, ಆತುರ ಹಾಗೂ ದಡ್ಡತನವೂ ಅಲ್ಲ. ಹೆಣವನ್ನು ಬಳಸಿಕೊಳ್ಳುವ ಟೂಲ್ ಕಿಟ್ ಮಾತುಗಳನ್ನಾಡಿದರು ಅಷ್ಟೇ’ ಎಂದು ಆರೋಪಿಸಿದ್ದಾರೆ.

‘ಬಿಜೆಪಿಯ ಟೋಪಿ ಹಾಕಿದಾಗ ಹೆಣ ರಾಜಕೀಯದ ಮನಸ್ಥಿತಿ ಜಾಗೃತವಾಗಿತ್ತು, ಟೋಪಿ ತೆಗೆದಾಗ ವಾಸ್ತವದ ಅರಿವಾಯ್ತು’ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.