ADVERTISEMENT

ಅಕ್ರಮ ಹಣ ವರ್ಗಾವಣೆ ಕಾರಣ ಪಿಎಫ್‌ಐ ವಿರುದ್ಧ ತನಿಖೆ: ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 20:44 IST
Last Updated 26 ಡಿಸೆಂಬರ್ 2020, 20:44 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿಕ್ಕಮಗಳೂರು: ‘ಪಿಎಫ್‌ಐ (ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ) ಬಾಲ ಬಿಚ್ಚಿ ಮೆರೆಯುವ ಕಾಲ ಈಗ ಇಲ್ಲ. ಬಾಲ ಬಿಚ್ಚಿದರೆ ಬಾಲ, ತಲೆ ‘ಕಟ್‌’ ಮಾಡುತ್ತೇವೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ರಾಜ್ಯ ಘಟಕದ ಆಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಕಚೇರಿಗೆ ಪಿಎಫ್‌ಐ ಕಾರ್ಯಕರ್ತರು ಮುತ್ತಿಗೆ ಹಾಕಿರುವುದು ಖಂಡನೀಯ. ಅಕ್ರಮ ಹಣ ವರ್ಗಾವಣೆ ಜಾಡು ಪತ್ತೆ ತನಿಖಾ ಕಾರ್ಯದಲ್ಲಿ ಜಾರಿ ನಿರ್ದೇಶನಾಲಯ ತೊಡಗಿದೆ. ತನಿಖೆ ಮಾಡಬಾರದು ಎಂದು ಹೇಳಲು ಪಿಎಫ್‌ಐಗೆ ಏನು ಅಧಿಕಾರ ಇದೆ’ ಎಂದು ಪ್ರಶ್ನಿಸಿದರು.

‘ನೂರಾರು ಕೋಟಿ ಹಣ ಅಕ್ರಮ ವಾಗಿ ಬಂದಿರುವ ಮಾಹಿತಿ ಇದೆ. ಹೀಗಾಗಿ, ತನಿಖೆ ನಡೆಸಲಾಗುತ್ತಿದೆ. ಷರಿಯತ್ ಆಡಳಿತ ತರುತ್ತೇವೆ ಎಂದರೆ ಬಿಡಲಾಗುತ್ತದೆಯೇ? ಅವರನ್ನು ಹೆಡೆ ಮುರಿ ಕಟ್ಟುವ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.