ADVERTISEMENT

ಪರೀಕ್ಷೆ ಆರಂಭವಾದ 1 ಗಂಟೆಯ ಬಳಿಕ ವಾಟ್ಸ್‌ಆ್ಯಪ್‌ನಲ್ಲಿ ಪ್ರಶ್ನೆಪತ್ರಿಕೆ

ದ್ವಿತೀಯ ಪಿಯು ಪರೀಕ್ಷೆ ಆರಂಭ–ಸೋರಿಕೆ ಆಗಿಲ್ಲ: ಇಲಾಖೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 20:09 IST
Last Updated 4 ಮಾರ್ಚ್ 2020, 20:09 IST
ಬೆಂಗಳೂರಿನ ಬಸವನಗುಡಿ ಸಮೀಪದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆವರಣದಲ್ಲಿ ಬುಧವಾರ ಕೋವಿಡ್‌–19 ಸೋಂಕಿಗೆ ಬೆದರಿ ಮುಖಗವಸು ತೊಟ್ಟುಕೊಂಡು ದ್ವಿತೀಯ ಪಿಯು ಪರೀಕ್ಷೆಗೆ ಕೊನೆಯ ಕ್ಷಣದ ತಯಾರಿ ನಡೆಸಿದ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ
ಬೆಂಗಳೂರಿನ ಬಸವನಗುಡಿ ಸಮೀಪದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆವರಣದಲ್ಲಿ ಬುಧವಾರ ಕೋವಿಡ್‌–19 ಸೋಂಕಿಗೆ ಬೆದರಿ ಮುಖಗವಸು ತೊಟ್ಟುಕೊಂಡು ದ್ವಿತೀಯ ಪಿಯು ಪರೀಕ್ಷೆಗೆ ಕೊನೆಯ ಕ್ಷಣದ ತಯಾರಿ ನಡೆಸಿದ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ   

ಬೆಂಗಳೂರು/ವಿಜಯಪುರ: ದ್ವಿತೀಯ ಪಿಯು ಪರೀಕ್ಷೆ ಬುಧವಾರ ಆರಂಭವಾಗಿದ್ದು, ಭೌತವಿಜ್ಞಾನ ಪ್ರಶ್ನೆಪತ್ರಿಕೆ ಪರೀಕ್ಷೆ ಆರಂಭವಾದ 1 ಗಂಟೆಯ ಬಳಿಕ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದೆ. ಇದುಪ್ರಶ್ನೆಪತ್ರಿಕೆ ಸೋರಿಕೆಯಲ್ಲ ಎಂದು ಇಲಾಖೆಯ ನಿರ್ದೆಶಕರು ಹೇಳಿದ್ದಾರೆ.

ಇಂಡಿಯ ಶಾಂತೇಶ್ವರ ಕಾಲೇಜಿನಿಂದ ವಾಟ್ಸ್‌ಆ್ಯಪ್‌ನಲ್ಲಿ ಪ್ರಶ್ನೆಪತ್ರಿಕೆ ವೈರಲ್‌ ಆಯಿತು. ಮುರುಗೇಂದ್ರ ಹಿರೇಮಠನ ಪ್ರಶ್ನೆಪತ್ರಿಕೆಯನ್ನು ನಾಗಪ್ಪ ಸದರ ಮೊಬೈಲ್‌ನಲ್ಲಿ ಕ್ಲಿಕ್ಕಿಸಿದ್ದ ಎಂದು ಹೇಳಲಾಗಿದೆ.

‘ಈ ಪ್ರಕರಣವನ್ನು ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರ ಪ್ರಶ್ನೆಪತ್ರಿಕೆ ಸೋರಿಕೆ ಎಂದು ಪರಿಗಣಿಸಿಲ್ಲ.ಮರು ಪರೀಕ್ಷೆ ಅಗತ್ಯವಿಲ್ಲ. ವಿದ್ಯಾರ್ಥಿಗಳಿಬ್ಬರನ್ನೂ ವಶಕ್ಕೆ ಪಡೆಯಲಾಗಿದೆ. ಕೊಠಡಿಯ ಮೇಲ್ವಿಚಾರಕರಾದ ಎಂ.ಡಿ.ನಾರಾಯಣಕರ ಅವರನ್ನು ಅಮಾನತು ಮಾಡಲು ಇಲಾಖೆಗೆ ಶಿಫಾರಸು ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಹೇಳಿದರು.

ADVERTISEMENT

ಡಿಬಾರ್‌: ವಿಜಯಪುರ ಜಿಲ್ಲೆಯಲ್ಲೇ 8 ಮಂದಿ ಡಿಬಾರ್‌ ಆಗಿದ್ದಾರೆ. ಇತರೆಡೆ ಇಂತಹ ಪ್ರಸಂಗ ನಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.