ADVERTISEMENT

ಪಿಯು ಪೂರಕ ಪರೀಕ್ಷೆ: ಶೇ 30 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 19:55 IST
Last Updated 4 ಜುಲೈ 2019, 19:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದ್ವಿತೀಯ ಪಿಯು ಪೂರಕ ಪರೀಕ್ಷೆಯ ಫಲಿತಾಂಶಪ್ರಕಟವಾಗಿದ್ದು, 2,30,165 ವಿದ್ಯಾರ್ಥಿಗಳ ಪೈಕಿ 69,148 ಮಂದಿ (ಶೇ 30.04)ಉತ್ತೀರ್ಣರಾಗಿದ್ದಾರೆ.

1,35,535 ಬಾಲಕರ ಪೈಕಿ 37,798 ಮಂದಿ (ಶೇ 27.89) ಹಾಗೂ 94,630 ಬಾಲಕಿಯರ ಪೈಕಿ 31,350 ಮಂದಿ (ಶೇ 33.13) ತೇರ್ಗಡೆ ಹೊಂದಿದ್ದಾರೆ.

ನಗರ ಪ್ರದೇಶದಲ್ಲಿ 1,84,873 ಪೈಕಿ 55,942 (ಶೇ 30.25) ಹಾಗೂ ಗ್ರಾಮಾಂತರ ಭಾಗದಲ್ಲಿ 45,258 ಪೈಕಿ 13,192 (ಶೇ 29.
14) ಮಂದಿ ಪಾಸಾಗಿದ್ದಾರೆ. ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿಗಾಗಿ ಜುಲೈ 12ರೊಳಗೆ ಅರ್ಜಿ ಸಲ್ಲಿಸಬೇಕು.

ADVERTISEMENT

ಮರುಮೌಲ್ಯಮಾಪನ ಹಾಗೂ ಮರುಎಣಿಕೆಗೆ ಜು.20 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ www.pue.kar.nic.inಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.