ADVERTISEMENT

ಬಂಟ್ವಾಳ: 27 ವರ್ಷದಿಂದ ಇವರ ವಿದ್ಯಾರ್ಥಿಗಳು ಫೇಲ್ ಆಗಿಲ್ಲ

ತುಂಬೆ ಕಾಲೇಜಿನ ಉಪನ್ಯಾಸಕರಿಬ್ಬರ ಸಾಧನೆ

ಮೋಹನ್ ಕೆ.ಶ್ರೀಯಾನ್
Published 3 ಆಗಸ್ಟ್ 2020, 19:30 IST
Last Updated 3 ಆಗಸ್ಟ್ 2020, 19:30 IST
ವಿ.ಸುಬ್ರಹ್ಮಣ್ಯ ಭಟ್
ವಿ.ಸುಬ್ರಹ್ಮಣ್ಯ ಭಟ್   

ಬಂಟ್ವಾಳ: ಇಲ್ಲಿನ ತುಂಬೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಬ್ಬರು ಕಳೆದ 27 ವರ್ಷದಿಂದ ಬೋಧಿಸಿದ ವಿಷಯದ ವಿದ್ಯಾರ್ಥಿಗಳೆಲ್ಲರೂ ತೇರ್ಗಡೆ ಹೊಂದಿದ್ದಾರೆ.

1992ರಲ್ಲಿ ಮುಹಿಯುದ್ದೀನ್ ಎಜ್ಯುಕೇಶನಲ್ ಟ್ರಸ್ಟ್ ಮೂಲಕ ಆರಂಭಿಸಿದ ತುಂಬೆ ಪದವಿ ಪೂರ್ವ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ ವಿ.ಸುಬ್ರಹ್ಮಣ್ಯ ಭಟ್ ಮತ್ತು ಲೆಕ್ಕಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರದ ಉಪನ್ಯಾಸಕಿ ಕವಿತಾ ಈ ಸಾಧನೆ ಮಾಡಿದ್ದಾರೆ.

ಕಳೆದ 27 ವರ್ಷಗಳಿಂದ ಇವರಿಬ್ಬರು ಬೋಧಿಸುವ ವಿಷಯದಲ್ಲಿ ಯಾವುದೇ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿಲ್ಲ.

ADVERTISEMENT

‘ಪ್ರತೀ ವರ್ಷ ನವೆಂಬರ್ ಅಥವಾ ಡಿಸೆಂಬರ್ ತಿಂಗಳ ಒಳಗೆ ಎಲ್ಲ ಪಾಠ ಮುಗಿಸಿದ ಬಳಿಕ ಮತ್ತೆ ಪುನರಾವರ್ತನೆ ನಡೆಸುತ್ತೇವೆ. ಇದೇ ವೇಳೆ ಮೂರು ತಿಂಗಳು ಮೂರು ಪೂರ್ವ ಸಿದ್ಧತಾ ಪರೀಕ್ಷೆ, ಈ ನಡುವೆ ಕಿರು ಪರೀಕ್ಷೆ ನಡೆಸಿ ಎಲ್ಲಾ ವಿದ್ಯಾರ್ಥಿಗಳನ್ನು ಸಮಾನವಾಗಿ ಕಂಡು, ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡುತ್ತೇವೆ’ ಎಂದು ಉಪನ್ಯಾಸಕ ವಿ.ಸುಬ್ರಹ್ಮಣ್ಯ ಭಟ್ ಪ್ರತಿಕ್ರಿಯಿಸಿದ್ದಾರೆ.

‘ಅಂದಿನ ಪಾಠವನ್ನು ಅಂದೇ ಮನೆಯಲ್ಲಿ ಅಭ್ಯಾಸ ಮಾಡುವುದರ ಜೊತೆಗೆ ಅರ್ಥವಾಗದ ವಿಚಾರವನ್ನು ಮೊಬೈಲ್ ಮೂಲಕ ನಮಗೆ ಕರೆ ಮಾಡಿ ತಿಳಿದುಕೊಳ್ಳಲು ವಿದ್ಯಾರ್ಥಿಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದೇವೆ’ ಎನ್ನುತ್ತಾರೆ ಉಪನ್ಯಾಸಕಿ ಕವಿತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.