ADVERTISEMENT

ಕಣ್ಣುಗಳನ್ನು ದಾನ ನೀಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2021, 16:51 IST
Last Updated 29 ಅಕ್ಟೋಬರ್ 2021, 16:51 IST
ನಟ ಪುನೀತ್ ರಾಜ್‌ಕುಮಾರ್
ನಟ ಪುನೀತ್ ರಾಜ್‌ಕುಮಾರ್   

ಬೆಂಗಳೂರು: ನಟಪುನೀತ್ ರಾಜ್‌ಕುಮಾರ್ ಅವರು ತಮ್ಮ ಕಣ್ಣುಗಳನ್ನು ದಾನ ನೀಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾರೆ.

ತಂದೆ ರಾಜ್‌ಕುಮಾರ್ ಹಾಗೂ ತಾಯಿ ಪಾರ್ವತಮ್ಮ ಅವರು ಕೂಡ ತಮ್ಮ ನೇತ್ರಗಳನ್ನು ದಾನ ಮಾಡಿದ್ದರು. ಅದರಂತೆ ನಾರಾಯಣ ನೇತ್ರಾಲಯಕ್ಕೆ ಪುನೀತ್ ಅವರ ಕಣ್ಣುಗಳನ್ನೂ ದಾನ ಮಾಡಲಾಗಿದೆ.

‘1994ರಲ್ಲಿ ನಮ್ಮ ಆಸ್ಪತ್ರೆಯ ನೇತ್ರದ ಬ್ಯಾಂಕ್ ಉದ್ಘಾಟಿಸಿದ ರಾಜ್‌ಕುಮಾರ್ ಅವರು, ಕುಟುಂಬದ ಎಲ್ಲ ಸದಸ್ಯರು ನೇತ್ರದಾನ ಮಾಡುವುದಾಗಿ ಪ್ರತಿಜ್ಞೆ ಕೈಗೊಂಡಿದ್ದರು. ಅದರಂತೆ ಅವರ ಹಾಗೂ ಪಾರ್ವತಮ್ಮ ಅವರ ಕಣ್ಣುಗಳನ್ನು ದಾನವಾಗಿ ಪಡೆಯಲಾಗಿತ್ತು. ಪುನೀತ್‌ ಅವರ ಸಾವಿನ ಆಘಾತದ ನಡುವೆಯೂ ಕುಟುಂಬದವರು ನೇತ್ರದಾನ ಮರೆಯಲಿಲ್ಲ. ತಂದೆಯ ವಚನಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಪುನೀತ್, ಯುವಜನರಿಗೆ ಮಾದರಿಯಾಗಿದ್ದಾರೆ’ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ಭುಜಂಗ ಶೆಟ್ಟಿ ತಿಳಿಸಿದರು.

ADVERTISEMENT

‘ಅವರ ಕಣ್ಣುಗಳಿಂದ ಇಬ್ಬರಿಗೆ ದೃಷ್ಟಿ ದೊರೆಯಲಿದೆ. ನೇತ್ರಕ್ಕಾಗಿ ಹೆಸರು ನೋಂದಾಯಿಸಿದವರಿಗೆಎರಡು ದಿನಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಿ, ಕಣ್ಣನ್ನು ಅಳವಡಿಸಲಾಗುತ್ತದೆ’ ಎಂದರು.

ಕೆಲ ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದನಟ ಸಂಚಾರಿ ವಿಜಯ್ ಅವರು ಕೂಡ ಕಣ್ಣು ಸೇರಿದಂತೆ ವಿವಿಧ ಅಂಗಾಂಗಗಳನ್ನು ದಾನ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.