ADVERTISEMENT

ಶಿಶಿಲರ ಕಾದಂಬರಿ ‘ಪುಂಸ್ತ್ರಿ’ 11 ಭಾಷೆಗಳಿಗೆ ಭಾಷಾಂತರ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 19:22 IST
Last Updated 3 ಜನವರಿ 2019, 19:22 IST
ಸಂಸ್ಕೃತ ಮತ್ತು ತೆಲುಗಿಗೆ ಭಾಷಾಂತರಗೊಂಡು ಪ್ರಕಟಗೊಂಡ ‘ಪುಂಸ್ತ್ರಿ’ ಕಾದಂಬರಿ.
ಸಂಸ್ಕೃತ ಮತ್ತು ತೆಲುಗಿಗೆ ಭಾಷಾಂತರಗೊಂಡು ಪ್ರಕಟಗೊಂಡ ‘ಪುಂಸ್ತ್ರಿ’ ಕಾದಂಬರಿ.   

ಸುಳ್ಯ: ಹಿರಿಯ ಸಾಹಿತಿ ಡಾ. ಪ್ರಭಾಕರ ಶಿಶಿಲ ಅವರ ಮಹಾಭಾರತ ಆಧಾರಿತ ಕಾದಂಬರಿ ‘ಪುಂಸ್ತ್ರಿ’ 11 ಭಾಷೆಗಳಿಗೆ ಭಾಷಾಂತರಗೊಳ್ಳುತ್ತಿದೆ.

ಈ ಕೃತಿ ಈಗಾಗಲೇ ಸಂಸ್ಕೃತ ಮತ್ತು ತೆಲುಗಿಗೆ ಭಾಷಾಂತರಗೊಂಡು ಪ್ರಕಟಗೊಂಡಿದೆ. ಸುಳ್ಯ ಮತ್ತು ಕೊಡಗು ಜಿಲ್ಲೆಯಲ್ಲಿ ಪ್ರಭಾವಿ ಭಾಷೆ ಆಗಿರುವ ಅರೆಭಾಷೆಗೆ ಅನುವಾದಗೊಂಡು ಪ್ರಕಟಣೆ ಹಂತದಲ್ಲಿದೆ. ತುಳು, ಕೊಡವ, ಕೊಂಕಣಿ, ಮರಾಠಿ, ತಮಿಳು, ಮಲಯಾಳ, ಗುಜರಾತಿ ಮತ್ತು ಹಿಂದಿ ಭಾಷೆಗೆ ಅನುವಾದಗೊಳ್ಳುತ್ತಿದೆ. ಅಮೆರಿಕದಲ್ಲಿರುವ ಭಾರತೀಯರೊಬ್ಬರು ಇದನ್ನು ಇಂಗ್ಲಿಷ್‌ಗೆ ಅನುವಾದ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಯಕ್ಷಗಾನಕ್ಕೂ ರೂಪಾಂತರಗೊಳ್ಳಲಿದೆ ಎಂದು ಶಿಶಿಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT