ರಾಹುಲ್ ಗಾಂಧಿ
ಪಿಟಿಐ ಚಿತ್ರ
ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಲು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಬಯಸಿದ್ದರು. ಅದಕ್ಕಾಗಿ ಕಾಲಾವಕಾಶ ಕೇಳಿದ್ದರು. ಆದರೆ, ಗುರುವಾರ ಇಬ್ಬರಿಗೂ ರಾಹುಲ್ ದರ್ಶನ ‘ಭಾಗ್ಯ’ ಸಿಗಲಿಲ್ಲ.
ರಾಹುಲ್ ಅವರು ಬುಧವಾರ ಪಾಟ್ನಾಕ್ಕೆ ತೆರಳಿದ್ದರು. ಗುರುವಾರ ನವದೆಹಲಿಯಲ್ಲೇ ಇದ್ದರು. ಪಕ್ಷ ಸಂಘಟನೆ ಸಂಬಂಧ ಗುಜರಾತ್‌ನ ನಾಯಕರೊಂದಿಗೆ ಸಭೆ ನಡೆಸಿದರು. ರಾಹುಲ್ ಕಚೇರಿಯಿಂದ ಕರೆ ಬರಬಹುದು ಎಂದು ಉಭಯ ನಾಯಕರು ಸಂಜೆಯ ವರೆಗೆ ಕಾದರು. ಬಳಿಕ ಸುರ್ಜೇವಾಲಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಬ್ಬರು ನಾಯಕರು ಭಾಗಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.